alex Certify
ಕನ್ನಡ ದುನಿಯಾ       Mobile App
       

Kannada Duniya

ವೃದ್ಧನಿಗೆ ನಡುರಸ್ತೆಯಲ್ಲೆ ಕಪಾಳಮೋಕ್ಷ ಮಾಡಿದ ಪೇದೆ

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆಂಬ ಕಾರಣಕ್ಕೆ ಪೇದೆಯೊಬ್ಬ ವೃದ್ಧನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ.

ಉಲ್ಲಾಸ್ ನಗರ ನಿವಾಸಿ ಜವಾಹರ್ ವಸುಮಲ್ ಲುಲ್ಲಾ ಎಂಬುವವರು ಭಾನುವಾರ ಮಧ್ಯಾಹ್ನ ತಮ್ಮ ದ್ವಿಚಕ್ರ ವಾಹನವನ್ನು ನೋ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದರೆನ್ನಲಾಗಿದೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಜವಾಹರ್ ಅವರ ವಾಹನವನ್ನು ತಮ್ಮ ವಾಹನದಲ್ಲಿ ಎತ್ತಿ ಹಾಕಿಕೊಂಡು ಹೊರಟಿದ್ದಾರೆ. ಆಗ ಓಡೋಡಿ ಬಂದ ಜವಾಹರ್ ವಾಹನ ಬಿಡುವಂತೆ ಮನವಿ ಮಾಡಿದ್ದು, ವಾಹನ ಮುಂದಕ್ಕೆ ಚಲಾಯಿಸಲಾಗಿದೆ.

ವಾಹನದ ಹಿಂದೆಯೇ ಜವಾಹರ್ ಅವರು ಓಡಿದ್ದು, ಆಗ ವಾಹನದಿಂದ ಕೆಳಗಿಳಿದ ಪೇದೆ ಪಾಟೀಲ್ ಎಂಬಾತ ಜವಾಹರ್ ಅವರ ಮೇಲೆ ಕೈ ಮಾಡಿದ್ದಾರೆ. ಜವಾಹರ್ ಸಹ ಪೇದೆಗೆ ತಿರುಗಿಸಿ ಹೊಡೆದಿದ್ದು, ಸ್ಥಳದಲ್ಲಿದ್ದವರೊಬ್ಬರು ಈ ಎಲ್ಲಾ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...