alex Certify
ಕನ್ನಡ ದುನಿಯಾ       Mobile App
       

Kannada Duniya

ಮರಣಶಯ್ಯೆಯಲ್ಲಿದ್ದ ರೋಗಿಗೆ ಮಾಟ-ಮಂತ್ರ ಮಾಡಿಸಿದ ವೈದ್ಯ

ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯ ಮೇಲೆ ಮೂಢನಂಬಿಕೆಯ ಆಚರಣೆಗಳನ್ನು ನಡೆಸಲು ಅವಕಾಶ ನೀಡಿದ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂಧ್ಯಾ ಸೋನಾವನೆ ಎಂಬ ಮಹಿಳೆ ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಾಗಿದ್ದಳು.

ಮಹಿಳೆಗೆ ಎದೆಯೊಳಗೆ ಬಾವು ಉಂಟಾಗಿತ್ತು. ಮೂರು ತಿಂಗಳ ಹಿಂದೆ ಡಾ.ಸತೀಶ್ ಚೌಹಾಣ್ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದ್ರೆ ಸರ್ಜರಿ ಬಳಿಕ ಸಂಧ್ಯಾಗೆ ಎದೆಯಲ್ಲಿ ಇನ್ಫೆಕ್ಷನ್ ಆಗಿತ್ತು. ನಂತರ ಚೌಹಾಣ್ ಬೇರೊಬ್ಬ ವೈದ್ಯರನ್ನು ರೆಫರ್ ಮಾಡಿದ್ದ.

ಅವರು ಇನ್ನೊಂದಷ್ಟು ಚಿಕಿತ್ಸೆ ನೀಡಿದ್ರು. ಆದ್ರೆ ಸಂಧ್ಯಾ ಆರೋಗ್ಯ ತೀರಾ ಹದಗೆಟ್ಟಿತ್ತು. ಬಳಿಕ ಅವಳನ್ನು ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಭಾನುವಾರ ಆಕೆ ಮೃತಪಟ್ಟಿದ್ದಾಳೆ. ಸಾವಿಗೂ ಒಂದು ದಿನ ಮೊದಲು, ವ್ಯಕ್ತಿಯೊಬ್ಬ ಆಕೆಗೆ ಹೂವು, ಕುಂಕುಮವನ್ನೆಲ್ಲ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.

ಡಾ.ಚೌಹಾಣ್ ಕೂಡ ಪಕ್ಕದಲ್ಲೇ ನಿಂತು ಇದನ್ನೆಲ್ಲ ನೋಡುತ್ತಿದ್ರು. ಹಾಗಾಗಿ ಇಬ್ಬರ ವಿರುದ್ಧವೂ ಕೇಸ್ ದಾಖಲು ಮಾಡಲಾಗಿದೆ. ಡಾ.ಚೌಹಾಣ್ ಸಂಧ್ಯಾಗೆ 2 ಸರ್ಜರಿ ಮಾಡಿದ್ದಾರಂತೆ. ಆಕೆಯ ಹುಟ್ಟಿದ ದಿನಾಂಕ, ಸಮಯ, ರಾಶಿ ಇವನ್ನೆಲ್ಲ ತಿಳಿದುಕೊಂಡು ಮೂಢನಂಬಿಕೆ ಆಚರಣೆಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ ಯಾವುದೋ ಒಂದು ಮಂತ್ರ ಜಪಿಸುವಂತೆ ಕುಟುಂಬಸ್ಥರಿಗೂ ಸೂಚಿಸಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...