alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ತಾಣಗಳಲ್ಲಿ ಹಿಜ್ಬುಲ್ ಉಗ್ರರ ಮೋಜು

hizbul

ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಪರಸ್ಪರ ತಬ್ಬಿಕೊಂಡು ನಗುತ್ತ ಎಂಜಾಯ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ನಾಲ್ಕೂವರೆ ನಿಮಿಷಗಳ ವಿಡಿಯೋ ಇದು, 12 ಉಗ್ರರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ನಗುತ್ತ, ತಬ್ಬಿಕೊಳ್ಳುತ್ತ ಮಸ್ತಿ ಮಾಡುತ್ತಿದ್ದಾರೆ.

ಆ ಶಸ್ತ್ರಾಸ್ತ್ರಗಳೆಲ್ಲ ಭಾರತೀಯ ಭದ್ರತಾ ಪಡೆಯಿಂದ ಕದ್ದು ತಂದಿದ್ದು ಎನ್ನಲಾಗಿದೆ. 22 ವರ್ಷದ ಬುಹ್ರನ್ ವನಿ ಹಿಜ್ಬುಲ್ ಸಂಘಟನೆಯ ಯುವ ಮುಖಂಡನಾಗಿದ್ದ. ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಕಾಶ್ಮೀರಿ ಯವಕರನ್ನು ಸಂಘಟನೆಗೆ ಸೇರಿಸಿಕೊಳ್ತಾ ಇದ್ದ.

ಭದ್ರತಾ ಪಡೆಗಳಿಗೆ ಟಾಂಟ್ ಮಾಡುವಂತಹ ಫೋಟೋಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ. ಸೈನಿಕರ ಶಸ್ತ್ರಾಸ್ತ್ರಗಳನ್ನು ಕಸಿಯಲು ಪ್ರೇರೇಪಿಸುತ್ತಿದ್ದ. ಈತನನ್ನು ಕಳೆದ ಜುಲೈನಲ್ಲಿ ಹತ್ಯೆ ಮಾಡಲಾಗಿತ್ತು. ಕಳೆದ ಕೆಲ ತಿಂಗಳಲ್ಲಿ ಶಸ್ತ್ರಾಸ್ತ್ರ ಕಳವು ಪ್ರಕರಣ ಹೆಚ್ಚುತ್ತಲೇ ಇದೆ. ಸುಮಾರು 67 ರೈಫಲ್ ಗಳನ್ನು ಉಗ್ರರು ಎಗರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...