alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಪೆಂಡಾಲ್ ನಲ್ಲಿ ಜನರತ್ತ ನೋಟು ತೂರಿದ ಕಾಂಗ್ರೆಸ್ ನಾಯಕ

ಮುಂಬೈ: ಜನರ ಸಮ್ಮುಖ ತಾವು ವಿಭಿನ್ನವಾಗಿ ಕಾಣಿಸಿಕೊಳ್ಳಬೇಕೆಂಬುದು ಬಹುತೇಕ ರಾಜಕಾರಣಿಗಳಿಗೆ ಒಂದು ಹವ್ಯಾಸ. ಮುಂಬೈನಲ್ಲೊಬ್ಬ ರಾಜಕಾರಣಿ ಗಣಪತಿ ಉತ್ಸವದ ಕಾರ್ಯಕ್ರಮಕ್ಕೆ ಬಂದು ಜನರತ್ತ ನೋಟು ಎರಚಿ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಆರೀಫ್ ನಸೀಮ್ ಎಂಬವರು ಸಾರ್ವಜನಿಕರತ್ತ ನೋಟು ಎರಚಿದ್ದ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ಮುಂಬೈನ ಚಂಡಿವಲಿ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಗಣಪತಿ ಉತ್ಸವದಲ್ಲಿ ಈ ಘಟನೆ ನಡೆದಿದೆ. ಎಷ್ಟು ಹಣ ಎರಚಲಾಗಿದೆ ಎಂಬ ಬಗ್ಗೆ ತನಿಖೆಯಾಗಬೇಕೆಂದು ಸ್ಥಳೀಯ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಆದರೆ, ಈ ವಿಡಿಯೋವನ್ನು ರಾಜಕೀಯ ಪಿತೂರಿ ಎಂದು ಆರೀಫ್ ನಸೀಮ್ ಪ್ರತಿಕ್ರಿಯೆ ನೀಡಿದ್ದು, ಭಾನುಶಾಲಿ ಸಮಾಜದಲ್ಲಿ ಇದೊಂದು ಸಂಪ್ರದಾಯ. ಅವರ ಭಾವನೆಗಳನ್ನು ನೋಯಿಸಲು ನಾನು ಇಚ್ಚಿಸುವುದಿಲ್ಲ. ಅತಿಥಿಗಳು ನೀಡಿದ ಹಣವನ್ನು ಅವರು ಗೋಶಾಲೆಗೆ ನೀಡುತ್ತಾರೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಸಂಘಟಕ ಹಾಗೂ ಎಂಎನ್ಎಸ್ ಮುಖಂಡ ಮಹೇಂದ್ ಭಾನುಶಾಲಿ ಅವರು ಈ ರೀತಿ ನೋಟು ಎರಚಿದ್ದು ಸಂಪ್ರದಾಯ ಎಂದು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿ ಬಳಕೆಯಾದ ಹಣವನ್ನು ಶಿಕ್ಷಣ, ಗೋ ರಕ್ಷಣೆಗೆ ಬಳಸುತ್ತೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...