alex Certify
ಕನ್ನಡ ದುನಿಯಾ       Mobile App
       

Kannada Duniya

ನಗರ ಸಂಚಾರ ಕೈಗೊಂಡಿದ್ದ ಕೈದಿಗೆ ಪೊಲೀಸರದ್ದೇ ಬೆಂಗಾವಲು

ಪ್ರಭಾವಿಗಳು ಅಕ್ರಮ ಎಸಗಿ ಜೈಲು ಪಾಲಾದ ವೇಳೆ ತಮ್ಮ ಹಣ ಬಲದಿಂದಲೇ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಆದರೆ ಈ ಪ್ರಕರಣ ಕೊಂಚ ವಿಭಿನ್ನ.

ರಾಜಸ್ಥಾನದ ಅಲ್ವಾರ್ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಬಹುಕೋಟಿ ಅಕ್ರಮ ಹಣಕಾಸು ವಹಿವಾಟು ಹಗರಣವೊಂದರಲ್ಲಿ ಜೈಲು ಪಾಲಾಗಿರುವ ಉತ್ತರ ಪ್ರದೇಶದ ಗೋರಕ್ಪುರ ಮೂಲದ ದಿಲೀಪ್ ವರ್ಮಾ ಎಂಬಾತ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಪಡೆದುಕೊಂಡಿದ್ದಾನೆ.

ಅಷ್ಟೇ ಅಲ್ಲ, ಆತ ನಗರ ಸಂಚಾರ ಕೈಗೊಳ್ಳಲು ಬಯಸಿದ ವೇಳೆ ಖುದ್ದು ಜೈಲಿನ ಪೊಲೀಸರೇ ತಮ್ಮ ಬೆಂಗಾವಲಿನಲ್ಲಿ ಕರೆದೊಯ್ದಿದ್ದಾರೆ. ಈ ದೃಶ್ಯಾವಳಿಗಳು ಜೈಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ಧ ಈಗ ಕ್ರಮ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...