alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಯೂರಿಟಿ ಗಾರ್ಡ್ ಬದುಕನ್ನೇ ಬದಲಾಯಿಸಿತು ಆ ವಿಡಿಯೋ

guard

ಸಾಮಾಜಿಕ ತಾಣಗಳು ಎಲೆಮರೆ ಕಾಯಿಯಂತಿದ್ದ ಪ್ರತಿಭೆಗಳನ್ನು ವಿಶ್ವಕ್ಕೆ ಪರಿಚಯಿಸುವ ವೇದಿಕೆಯಾಗಿ ಮಾರ್ಪಟ್ಟಿವೆ. ಎಷ್ಟೋ ಪ್ರತಿಭಾವಂತರಿಗೆ ಇದರಿಂದ ಅವಕಾಶಗಳು ಕೂಡ ಸಿಕ್ಕಿವೆ. ಆರ್ಡಿನರಿ ಮಂದಿಯ ಎಕ್ಸ್ ಟ್ರಾ ಆರ್ಡಿನರಿ ಟ್ಯಾಲೆಂಟ್ ಎಲ್ಲಾ ಕಡೆ ಚಿರಪರಿಚಿತವಾಗ್ತಿರೋದು ಸಾಮಾಜಿಕ ತಾಣಗಳ ಮೂಲಕವೇ.

ಇಂಥದ್ದೇ ವೈರಲ್ ಫೋಟೋದಿಂದ ಪಾಕಿಸ್ತಾನದ ಚಾಯ್ ವಾಲಾ ಒಬ್ಬ ಮಾಡೆಲ್ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಇಪ್ಪತ್ತು ವರ್ಷದ ಯುವಕನೊಬ್ಬನಿಗೂ ಅಂಥದ್ದೇ ಚಾನ್ಸ್ ಸಿಕ್ಕಿದೆ. ಸೆಕ್ಯೂರಿಟಿ ಗಾರ್ಡ್ ರತನ್ ಗಾಂಧಿ ಹಾಡಿದ ಗುಜರಾತಿ ಸಿನೆಮಾ ಒಂದರ ಹಾಡು ವೈರಲ್ ಆಗಿತ್ತು.

ಇದರಿಂದ ರತನ್ ಗಾಂಧಿ ಬದುಕಿಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ವೈರಲ್ ಆಗಿದ್ದ ವಿಡಿಯೋ ನೋಡಿ ಅಹಮದಾಬಾದ್ ನ ರೇಡಿಯೋ ಜಾಕಿ ದೇವಕಿ, ಸೆಕ್ಯೂರಿಟಿ ಗಾರ್ಡ್ ರತನ್ ನನ್ನು ತಮ್ಮ ಶೋಗೆ ಆಹ್ವಾನಿಸಿದ್ದರು. ಆ ಕಾರ್ಯಕ್ರಮದಲ್ಲೂ ರತನ್ ಹಿಂದಿ ಹಾಡುಗಳನ್ನು ಅದ್ಭುತವಾಗಿ ಹಾಡಿದ್ದರು.

ಇದೀಗ ರತನ್ ಗಾಂಧಿಯ ಕಂಠಸಿರಿ ಇಬ್ಬರು ಸಂಗೀತ ನಿರ್ದೇಶಕರನ್ನೂ ಸೆಳೆದಿದೆ. ಮ್ಯೂಸಿಕ್ ಡೈರೆಕ್ಟರ್ ಗಳಾದ ಸಚಿನ್-ಜಿಗರ್ ಸಹೋದರರು ರತನ್ ಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಆತನಿಂದ ಹಾಡು ಹಾಡಿಸುವುದಾಗಿ ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...