alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ಲು ಮಹಿಳೆ

ಸೋನಿಪತ್‌: ಟ್ರಾಫಿಕ್‌ ಪೊಲೀಸರ ಜತೆ ಮಧ್ಯ ವಯಸ್ಕ ಮಹಿಳೆಯೋರ್ವಳು ಅಸಹನೆಯಿಂದ ವರ್ತಿಸಿ, ಪೊಲೀಸರಿಗೆ ಮನಬಂದಂತೆ ಬೈಯುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ತಪ್ಪಾದ ದಾರಿಯಲ್ಲಿ ಹೆಲ್ಮೆಟ್‌ ಹಾಕದೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮಹಿಳೆಯನ್ನು ಪೊಲೀಸರು ತಡೆದು, ಫೈನ್‌ ಕಟ್ಟುವಂತೆ ಹೇಳಿದ್ದಾರೆ. ಪೊಲೀಸರು ಮಹಿಳೆ ಜತೆ ಸಭ್ಯವಾಗಿ ವರ್ತಿಸಿದ್ದು, ಹೆಲ್ಮೆಟ್‌ ಹಾಕುವಂತೆ ತಿಳಿ ಹೇಳಿದ್ದಾಳೆ. ಆದರೆ ಮಹಿಳೆ ಏಕಾಏಕಿ ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾಳೆ. ಪೊಲೀಸ್‌ ಪೇದೆ ಮಹಿಳೆಯ ವರ್ತನೆಯನ್ನು ವಿಡಿಯೋ ಮಾಡಿದ್ದಾನೆ.

ಗೀತ ಭವನ್‌ ಚೌಕ್‌ ರಸ್ತೆಯಲ್ಲಿ ಈ ನಾಟಕೀಯ ದೃಶ್ಯ ನಡೆದಿದ್ದು, ಸಾಕಷ್ಟು ಜನ ಮಹಿಳೆಯನ್ನು ಸಾಂತ್ವಾನ ಮಾಡಲು ಮುಂದಾಗಿದ್ದಾರೆ. ಇದೇ ಸಮಯದಲ್ಲಿ ಮಹಿಳೆಯ ತಾಯಿಯೂ ಮಧ್ಯ ಪ್ರವೇಶಿಸಿದ್ದು, ಪೊಲೀಸರೊಂದಿಗಿನ ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಆದರೆ ಒಂದೇ ಸಮನೆ ಮಹಿಳೆ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ.

ಮಹಿಳೆಯಾಗಿರುವ ಮಾತ್ರಕ್ಕೆ ಆ ಲಾಭವನ್ನು ಈ ರೀತಿ ಪಡೆದುಕೊಳ್ಳಬೇಡಿ ಎಂದು ಪೊಲೀಸರು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹೆಲ್ಮೆಟ್‌ ಹಾಕದೆ ಇರುವುದಕ್ಕೆ ಹಾಗೂ ತಪ್ಪು ಭಾಗದಲ್ಲಿ ವಾಹನ ಓಡಿಸಿದ್ದಕ್ಕೆ ದಂಡ ಕಟ್ಟಿಸಿಕೊಳ್ಳುವ ಮೂಲಕ ಪ್ರಹಸನ ಕೊನೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...