alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಧ್ಯಪ್ರದೇಶ ರಾಜ್ಯಪಾಲರ ವಿಡಿಯೋ

ಗುಜರಾತ್ ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಈಗ ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿದ್ದರೂ ಅದನ್ನು ಮರೆತು ರಾಜಕಾರಣದ ಮಾತುಗಳನ್ನಾಡಿ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಶುಕ್ರವಾರದಂದು ಸಾತ್ನಾ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದ ಆನಂದಿಬೆನ್ ಪಟೇಲ್, ಅವರುಗಳಿಗೆ ಮತ ಗಳಿಸುವುದು ಹೇಗೆ ಎಂಬ ಕುರಿತು ಪಾಠ ಮಾಡಿದ್ದಾರೆ. ಸಾತ್ನಾ ಬಿಜೆಪಿ ಜಿಲ್ಲಾಧ್ಯಕ್ಷ ನರೇಂದ್ರ ತ್ರಿಪಾಠಿ ಹಾಗೂ ಮೇಯರ್ ಮಮತಾ ಪಾಂಡೆ ಜೊತೆ ರಾಜ್ಯಪಾಲರು ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಮತ ಗಳಿಸುವುದು ಅಷ್ಟು ಸುಲಭವಲ್ಲ. ಮತದಾರರ ಮನೆ ಮನೆಗೆ ಭೇಟಿ ನೀಡಿ ಎಂದು ಹೇಳಿರುವ ಆನಂದಿಬೆನ್ ಪಟೇಲ್, ನರೇಂದ್ರ ಮೋದಿಯವರ ಕನಸು ಸಾಕಾರವಾಗಬೇಕೆಂದರೆ ಈ ಕೆಲಸ ಮಾಡಬೇಕು ಎಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಜೊತೆಗಿದ್ದ ಅಧಿಕಾರಿಗಳಿಗೆ ನಿಮಗೆ ಮತದ ಅವಶ್ಯಕತೆಯಿಲ್ಲ. ಆದರೆ ನಮಗೆ ಬೇಕಿದೆ ಎಂದು ರಾಜ್ಯಪಾಲೆ ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಕಿಡಿಕಿಡಿಯಾಗಿದ್ದು, ಸಂವಿಧಾನಾತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರು ಅದರ ಘನತೆಯನ್ನು ಮರೆತು ಬಿಜೆಪಿ ನಾಯಕರಂತೆ ವರ್ತಿಸಿದ್ದಾರೆಂದಿದ್ದಾರೆ. ಅಷ್ಟೇ ಅಲ್ಲ ರಾಜ್ಯಪಾಲೆ ಆನಂದಿಬೆನ್ ಪಟೇಲ್ ರ ವಿರುದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...