alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲುಗಳ ದುಃಸ್ಥಿತಿಗೆ ಸಾಕ್ಷಿ ಈ ವೈರಲ್ ವಿಡಿಯೋ

motorman

ದೇಶದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಮಳೆ ಬಂದ್ರೆ ನೀರು ಸೋರೋದು ಸರ್ವೇ ಸಾಮಾನ್ಯ. ಅದ್ರಲ್ಲೂ ಗ್ರಾಮೀಣ ಶಾಲೆಗಳು ಕೆರಗಳಂತಾಗುತ್ತವೆ. ಇನ್ನು ಹದಗೆಟ್ಟ ರಸ್ತೆ ತುಂಬಾ ನೀರು ತುಂಬಿ ಹರಿಯುತ್ತಿರುತ್ತದೆ. ವಾಹನ ಸವಾರರ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ಚರಂಡಿ ನೀರು ಮನೆಗಳಿಗೆ ನುಗ್ಗೋದು ಕೂಡ ಸರ್ವೇ ಸಾಮಾನ್ಯ.

ಆದ್ರೀಗ ರೈಲುಗಳ ಸ್ಥಿತಿಯೂ ಹೀಗೇ ಆಗಿದೆ. ಲೋಕೋ ಪೈಲಟ್ ಒಬ್ಬ ಮಳೆ ನೀರು ಸೋರುತ್ತಿದ್ದಿದ್ರಿಂದ ಛತ್ರಿ ಹಿಡಿದುಕೊಂಡು ರೈಲು ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಜಾರ್ಖಂಡ್ ನ ಧನ್ ಬಾದ್ ನಲ್ಲಿ ಸೆರೆಹಿಡಿದಿರುವ ದೃಶ್ಯ ಇದು. ನೀರು ಬಿದ್ದು ಕಂಟ್ರೋಲ್ ಪ್ಯಾನಲ್ ಗೆ ಹಾನಿಯಾಗಬಹುದು ಅನ್ನೋ ಆತಂಕ ಕೂಡ ಚಾಲಕನಿಗಿತ್ತು.

ಆತ ಆಗಾಗ ನೀರನ್ನು ಒರೆಸುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಈ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಕಳೆದ ಹಲವು ವರ್ಷಗಳಿಂದ ರೈಲಿನ ದುಃಸ್ಥಿತಿ ಹೀಗೇ ಇದೆ ಅಂತಾ ಹೇಳುತ್ತಿದ್ದ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡ್ರೆ ಅನಾಹುತಗಳನ್ನು ತಪ್ಪಿಸಬಹುದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...