alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಕಾಂಗ್ರೆಸ್ ನಾಯಕನ ಈ ವಿಡಿಯೋ

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಬಗ್ಗೆ ಚಿಂತೆ ಬೇಡ, ಅದನ್ನು ಚುನಾವಣೆ ಬಳಿಕ ನಾವು ನೋಡಿಕೊಳ್ಳುತ್ತೇವೆ ಎಂದು ಮುಸ್ಲಿಮರಿಗೆ ಅಭಯ ನೀಡುವ ಮೂಲಕ ಕಾಂಗ್ರೆಸ್ ಮುಖಂಡರೊಬ್ಬರು ವಿವಾದಕ್ಕೀಡಾಗಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್‍ನಾಥ್ ಹೀಗೆ ಹೇಳಿರುವ ವಿಡಿಯೊ ವೈರಲ್ ಆಗಿದ್ದು, ಅವರ ವಿರುದ್ಧ ಬಿಜೆಪಿ ಕಿಡಿಕಾರಿದೆ. ಆರೆಸ್ಸೆಸ್ ಕುರಿತ ಟೀಕೆಯನ್ನು ಕಟುವಾಗಿ ವಿರೋಧಿಸಿದೆ. ಮುಸ್ಲಿಮರು ಸೇರಿದ್ದ ಸಭೆಯೊಂದರಲ್ಲಿ ಮಾತನಾಡಿದ ಕಮಲ್‍ನಾಥ್, ಆರೆಸ್ಸೆಸ್ ಬಗ್ಗೆ ನೀವು ಚಿಂತಿಸಬೇಡಿ. ನ. 28ರಂದು ನಡೆಯುವ ಚುನಾವಣೆ ಬಳಿಕ ನಾವದನ್ನು ನೋಡಿಕೊಳ್ಳುತ್ತೇವೆ ಎಂಬುದಾಗಿ ಹೇಳಿದ್ದಾರೆ.

ಇದನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್‍ ಗೆ ಆರೆಸ್ಸೆಸ್ ಹಾಗೂ ಹಿಂದುಗಳ ಬಗ್ಗೆ ಎಷ್ಟು ದ್ವೇಷ ಇದೆ ಎಂಬುದನ್ನು ಕಮಲ್‍ನಾಥ್ ಹೇಳಿಕೆ ತೋರಿಸುತ್ತಿದೆ ಎಂದಿದೆ. ಕಾಂಗ್ರೆಸ್ ಹಾಗೂ ಅದರ ಅಧ್ಯಕ್ಷ ರಾಹುಲ್ ಗಾಂಧಿ ಅವರದ್ದು, ಫ್ಯಾನ್ಸಿ ಡ್ರೆಸ್ ಹಿಂದುಯಿಸಂ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...