alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪೊಲೀಸರು ನೀಡಿದ ನೆರವಿನ ವಿಡಿಯೋ

ಶನಿವಾರ ಹಾಗೂ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ದೆಹಲಿ ಹಾಗೂ ಎನ್‌ಸಿಆರ್‌ನ ಹಲವು ಪ್ರದೇಶಗಳು ಮುಳುಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.

ದೆಹಲಿ ಪೊಲೀಸರು ನೀರು ನಿಲ್ಲುವ ತಗ್ಗು ಪ್ರದೇಶಗಳು ಹಾಗೂ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವಲ್ಲಿ ಅತ್ಯುತ್ತಮ ಕಾರ್ಯ ಮಾಡಿದ್ದಾರೆ. ತಮ್ಮ ನಿಯಮಿತ ಕಾರ್ಯಚಟುವಟಿಕೆಗಳ ಹೊರತಾಗಿ, ಎಲ್ಲೆಲ್ಲಿ ನೀರು ನಿಂತಿದೆ, ಟ್ರಾಫಿಕ್ ಹೆಚ್ಚಿರುವ ಪ್ರದೇಶಗಳು ಯಾವುವು ಎಂಬ ವಿವರಗಳ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಗಳನ್ನು ಹಾಕುವ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಿದರು.

ಇತ್ತೀಚೆಗೆ, ನೀರು ನಿಂತ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಬಸ್‌ನಿಂದ ಕೆಳಕ್ಕಿಳಿಯಲು ಪ್ರಯಾಣಿಕರಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ನೆರವಾದ ವಿಡಿಯೋವೊಂದನ್ನು ದೆಹಲಿ ಟ್ರಾಫಿಕ್ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಿಂದ ಶೇರ್ ಮಾಡಲಾಗಿತ್ತು. ‘ನಮ್ಮ ಅಗತ್ಯ ಬಿದ್ದಾಗಲೆಲ್ಲ ನೆರವಿನ ಹಸ್ತ ಚಾಚುತ್ತೇವೆ’ ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿತ್ತು. ಇದಕ್ಕೆ ಟ್ವೀಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಯಮುನಾ ಬಝಾರ್‌ನ ಹನುಮಾನ್ ಮಂದಿರ ಸಮೀಪದ ನೀರು ತುಂಬಿದ ರಸ್ತೆಯಲ್ಲಿ ಸಿಲುಕಿಹಾಕಿಕೊಂಡ ಬಸ್ ಈ ವಿಡಿಯೋದಲ್ಲಿ ಕಂಡುಬರುತ್ತದೆ. ಅಂಗವಿಕಲರೂ ಸೇರಿದಂತೆ ಮೂವರು ಪ್ರಯಾಣಿಕರನ್ನು ಪೊಲೀಸ್ ಸಿಬ್ಬಂದಿ ಬಸ್‌ನಿಂದ ಕೆಳಕ್ಕಿಳಿಸುವುದು ಕಾಣುತ್ತದೆ. ಈ ವಾರವೂ ದೆಹಲಿಯಲ್ಲಿ ಇನ್ನಷ್ಟು ಮಳೆ ಬೀಳಬಹುದು ಹಾಗೂ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭವಿಷ್ಯ ನುಡಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...