alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ರೈಲಿನಲ್ಲಿ ಯುವತಿ ಮಾಡಿದ ಅಪಾಯಕಾರಿ ಸ್ಟಂಟ್…!

ಮುಂಬೈ: ಇದೇ ಮೊದಲ ಬಾರಿಗೆ ಮುಂಬೈ ಲೋಕಲ್ ಟ್ರೇನ್‌ನಲ್ಲಿ ಯುವತಿಯೋರ್ವಳು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೇಗವಾಗಿ ಚಲಿಸುತ್ತಿರುವ ಟ್ರೇನ್‌ನ ಬಾಗಿಲಿನಿಂದ ಹೊರಕ್ಕೆ ಕೈಚಾಚುವುದು ಸೇರಿದಂತೆ ಹಲವು ಅಪಾಯಕಾರಿ ಸಾಹಸೀಯ ಪ್ರದರ್ಶನವನ್ನು ಯುವತಿ ನೀಡಿದ್ದಾಳೆ. ಸಾಮಾನ್ಯವಾಗಿ ಯುವಕರು ಇಂತಹ ವಿಡಿಯೋಗಳನ್ನು ಮಾಡಿ, ವೈರಲ್‌ ಆಗುತ್ತಿತ್ತು. ಇದೀಗ ಯುವತಿಯೂ ಇಂತಹ ಹುಚ್ಚಾಟಕ್ಕೆ ಇಳಿದಿರುವುದು ಆತಂಕಕ್ಕೀಡು ಮಾಡಿದೆ.

ಟ್ರೇನ್‌ನಲ್ಲಿದ್ದ ಪ್ರಯಾಣಿಕರೊಬ್ಬರು, ಯುವತಿಯ ಈ ಅಪಾಯಕಾರಿ ಸಾಹಸಗಳನ್ನು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ವಿಡಿಯೋ ಮಾಡಿರುವ ಪ್ರಯಾಣಿಕರು, ಸೆಂಟ್ರಲ್‌ ರೈಲ್ವೆ ಹಾಗೂ ಮುಂಬೈನ ಇತರ ರೈಲ್ವೆ ಇಲಾಖೆ ಟ್ವಿಟರ್‌ ಅಕೌಂಟ್‌ಗಳಿಗೆ ಟ್ಯಾಗ್‌ ಮಾಡಿದ್ದಾರೆ. ಈ ಸಂಬಂಧ ರೈಲ್ವೆ ಭದ್ರತಾ ಪಡೆ ಸಿಬ್ಬಂದಿ, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರೆ ಯುವತಿಯನ್ನು ಗುರುತಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಕಳೆದ ತಿಂಗಳು ಯುವಕರ ತಂಡವೊಂದು ಚಲಿಸುತ್ತಿರುವ ಟ್ರೇನ್‌ನಲ್ಲಿ ಸಾಹಸಗಳನ್ನು ಸೆಲ್ಫಿ ಮೂಲಕ ವಿಡಿಯೋ ಮಾಡಿ ಸುದ್ದಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...