alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ನಶೆಯಲ್ಲಿ 3 ವರ್ಷದ ಮಗುವಿಗೆ ನಿರ್ದಯವಾಗಿ ಹೊಡೆದ ತಂದೆ

ಆಲ್ಕೋಹಾಲ್ ಸೇವನೆ ಮಾಡಿದ ವ್ಯಕ್ತಿಗೆ ಮೈ ಮೇಲೆ ಪ್ರಜ್ಞೆಯಿರೋದಿಲ್ಲ. ಮದ್ಯಪಾನ ಮಾಡಿದ ವ್ಯಕ್ತಿಗೆ ಏನು ಮಾಡ್ತಿದ್ದಾನೆಂಬುದು ಗೊತ್ತಿರೋದಿಲ್ಲ. ಸಂಬಂಧ, ಪ್ರೀತಿ, ಮಾನವೀಯತೆ ಮರೆತು ಅಪರಾಧಗಳನ್ನು ಮಾಡಲು ಮುಂದಾಗ್ತಾನೆ. ಪತ್ನಿ, ಸಹೋದರ, ಸಹೋದರಿಯರಿಗೆ ಹೊಡೆಯೋದು ಸಾಮಾನ್ಯ. ಆದ್ರೆ ಮಗುವಿಗೆ ನಿರ್ದಯವಾಗಿ ಹೊಡೆದ ಕುಡುಕ ತಂದೆಯೊಬ್ಬನ ವಿಡಿಯೋ ವೈರಲ್ ಆಗಿದೆ.

ಹೈದ್ರಾಬಾದ್ ನಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಮೊದಲು ಪತ್ನಿ ಜೊತೆ ಜಗಳವಾಡಿದ್ದಾನೆ. ನಂತ್ರ 3 ವರ್ಷದ ಮಗುವಿಗೆ ಥಳಿಸಿದ್ದಾನೆ. ಮಗು ಅಳ್ತಿದ್ದರೂ ಕುಡುಕ ವ್ಯಕ್ತಿಗೆ ಕರುಣೆ ಬಂದಿಲ್ಲ. ಮಗು ತಂದೆ ಹೊಡೆತ ತಪ್ಪಿಸಿಕೊಳ್ಳಲು ತಾಯಿ ಬಳಿ ಹೋಗ್ತಾಳೆ. ಆಕೆಯನ್ನು ರಕ್ಷಿಸಲು ತಾಯಿ ಹಾಗೂ ಸುತ್ತಮುತ್ತಲಿನ ಜನರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಜನರ ಮಾತು ಕೇಳದ ತಂದೆ ಮಾತ್ರ ಮಗಳನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾನೆ.

ವಿಡಿಯೋ ವೈರಲ್ ಆಗ್ತಿದ್ದಂತೆ ತಂದೆ ವಿರುದ್ಧ ದೂರು ದಾಖಲಿಸಲಾಗಿದೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಆರೋಪಿ ತಂದೆ ತಲೆ ಮರೆಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...