alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಗೆ ಕಿರುಕುಳ ನೀಡ್ತಿದ್ದ ವಿಡಿಯೋ ವೈರಲ್

ಬಿಹಾರದಲ್ಲಿ ಮತ್ತೊಂದು ಕಿರುಕುಳದ ಘಟನೆಯ ವಿಡಿಯೋ ವೈರಲ್ ಆಗಿದೆ. ಘಟನೆ ನಡೆದಿರೋದು ಗಯಾ ಜಿಲ್ಲೆಯಲ್ಲಿ. ಅಪರಿಚಿತ ಹುಡುಗ್ರು ಹುಡುಗಿಗೆ ಕಿರುಕುಳ ನೀಡಿದ್ದಾರೆ. ಪೀಡಿತೆಗೆ ಕಿರುಕುಳ ನೀಡಿದವರಲ್ಲಿ ವೃದ್ಧ ಕೂಡ ಸೇರಿದ್ದಾನೆ.

ಹುಡುಗಿ ದುಪ್ಪಟ್ಟಾ ಎಳೆದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆರೋಪಿಗಳಲ್ಲಿಯೇ ಒಬ್ಬರು ವಿಡಿಯೋ ಕೂಡ ಮಾಡಿದ್ದಾರೆ. ವಿಡಿಯೋ ಮಾದ್ಯಮಗಳಲ್ಲಿ ವೈರಲ್ ಆಗ್ತಿದ್ದಂತೆ ಸೂಕ್ತ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ಹುಡುಗಿ ಜೊತೆ ಸ್ನೇಹಿತ ಕೂಡ ಇದ್ದ ಎನ್ನಲಾಗಿದೆ. ಆರಂಭದಲ್ಲಿ ಪೀಡಿತೆ ತನ್ನ ತಂಗಿ ಎಂದ ಸ್ನೇಹಿತ ಆಕೆಯ ರಕ್ಷಣೆಗೆ ಮುಂದಾಗಿದ್ದಾನೆ. ಆದ್ರೆ ಆತನಿಗೂ ಆರೋಪಿಗಳು ಹೊಡೆದಿದ್ದಾರೆ. ಪೀಡಿತೆ, ಅಣ್ಣ ಅಣ್ಣ ಎಂದು ಗೊಗರೆಯುತ್ತಿದ್ದಾಳೆ. ತನ್ನನ್ನು ಬಿಡುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾಳೆ. ಆದ್ರೆ ಆರೋಪಿಗಳ ಮನಸ್ಸು ಮಾತ್ರ ಕರಗಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...