alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯ ರಸ್ತೆಯಲ್ಲಿ ಹುಡುಗಿ ಬಟ್ಟೆ ಬಿಚ್ಚಿದ್ರು

ಬಿಹಾರದ ಜಹಾನಾಬಾದ್ ನಲ್ಲಿ ಆಘಾತಕಾರಿ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಊಹಿಸಲೂ ಸಾಧ್ಯವಾಗದಂತಹ ಘೋರ ಘಟನೆಗೆ ಗೂಂಡಾಗಳು ಸಾಕ್ಷಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಎರಡು ತಂಡ ರಚಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ವಿಡಿಯೋದಲ್ಲಿ ಕಾಣಿಸಿಕೊಂಡ ಹುಡುಗಿ ಅಪ್ರಾಪ್ತೆಯಂತೆ ಕಾಣ್ತಿದ್ದಾಳೆ. ಬೈಕ್ ಪಕ್ಕದಲ್ಲಿ ಬಿದ್ದಿದೆ. ಬೈಕ್ ನಲ್ಲಿ ಹುಡುಗಿ ಹೋಗ್ತಿದ್ದ ವೇಳೆ ಅಪ್ರಾಪ್ತ ಗೂಂಡಾಗಳು ಆಕೆಯನ್ನು ಹಿಡಿದಿರುವ ಸಾಧ್ಯತೆಯಿದೆ. ಆಕೆಯನ್ನು ಒಂದು ಡಜನ್ ಗೂ ಹೆಚ್ಚು ಮಂದಿ ಸುತ್ತುವರೆದಿದ್ದಾರೆ.

ಕೆಲವರು ಆಕೆಯನ್ನು ಹಿಡಿದಿದ್ರೆ ಮತ್ತೆ ಕೆಲವರು ಬಟ್ಟೆ ಬಿಚ್ಚಿದ್ದಾರೆ. ಶನಿವಾರ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋ ಪೊಲೀಸ್ ಕೈಗೆ ಸಿಕ್ಕಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಹಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿಡಿಯೋ ಇದು ಎನ್ನಲಾಗ್ತಿದೆ. ಬೈಕ್ ನಂಬರ್ ಮೂಲಕ ಮಾಲೀಕನನ್ನು ಪತ್ತೆ ಹಚ್ಚಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...