alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೇರಿದ್ದ ಯುವತಿಯರು ಮೆಟ್ರೋ ರೈಲಲ್ಲೇ…!

METRO 88

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಹೆಣ್ಣುಮಕ್ಕಳ ಕುರಿತಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಬಲೀಕರಣ, ಅಭಿವೃದ್ಧಿ, ಸಾಧನೆ ಕುರಿತಂತೆ ಚರ್ಚೆಗಳು ನಡೆದಿವೆ. ಇದೇ ಸಂದರ್ಭದಲ್ಲಿ ನವದೆಹಲಿಯ ಮೆಟ್ರೋ ರೈಲಿನಲ್ಲಿ ಘಟನೆಯೊಂದು ನಡೆದಿದೆ.

ಮಹಿಳಾ ದಿನಾಚರಣೆಯಂದು ರಾತ್ರಿ ಕಂಠಪೂರ್ತಿ ಮದ್ಯಸೇವಿಸಿದ್ದ ಯುವತಿಯರ ಗುಂಪೊಂದು ಸಿಕ್ಕಾಪಟ್ಟೆ ದಾಂಧಲೆ ನಡೆಸಿದ ಘಟನೆ ನಡೆದಿದೆ. ಭರ್ಜರಿ ಪಾರ್ಟಿ ಮುಗಿಸಿ ತೂರಾಡುತ್ತಲೇ ದೆಹಲಿ ಮೆಟ್ರೋ ರೈಲು ಏರಿದ ಯುವತಿಯರು ತನ್ನ ಪಾಡಿಗೆ ತಾನು ನಿಂತಿದ್ದ ಪುರುಷನೊಬ್ಬನನ್ನು ರೇಗಿಸಿದ್ದಾರೆ. ಆತ ಈ ಯುವತಿಯರ ಮಾತಿಗೆ ಸ್ವಲ್ಪವೂ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿ ನಿಂತಿದ್ದರಿಂದ, ಇನ್ನಷ್ಟು ಹುರುಪಿನಿಂದ ಯುವತಿಯರು ರೇಗಾಡಿದ್ದಾರೆ.

ಆ ಬಡಪಾಯಿ ಪ್ರಯಾಣಿಕನನ್ನು ಬಾಯಿಗೆ ಬಂದಂತೆ ಬೈದು ಹೀಯಾಳಿಸಿದ್ದಾರೆ. ಮದ್ಯದ ಅಮಲಿನಲ್ಲಿ ಯುವತಿಯರು ಸಹಪ್ರಯಾಣಿಕನೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...