alex Certify
ಕನ್ನಡ ದುನಿಯಾ       Mobile App
       

Kannada Duniya

ಹಸಿದ ಸಿಂಹದೊಂದಿಗೆ ಚೆಲ್ಲಾಟವಾಡಿದ್ದಾನೆ ಈತ

ಗುಜರಾತ್ ನ ಪ್ರಸಿದ್ಧ ಏಷ್ಯಾಟಿಕ್ ಸಿಂಹ ಇದೀಗ ಆಹಾರಕ್ಕಾಗಿ ಅರಸುವ ಪರಿಸ್ಥಿತಿಗೆ ಬಂದು ತಲುಪಿವೆ. ಜುನಾಗಢದ ರಾಜಕೋಟ್ ನಲ್ಲಿರುವ ಗಿರ್ ಅಭಯಾರಣ್ಯದಲ್ಲಿರುವ ಈ ಸಿಂಹಗಳು ಆಹಾರವಿಲ್ಲದೆ ಪರದಾಡುತ್ತಿವೆ. ಇದನ್ನು ಬಳಸಿಕೊಂಡು ಹತ್ತಿರದ ಗ್ರಾಮದ ವ್ಯಕ್ತಿಯೊಬ್ಬ ಕೋಳಿಯೊಂದನ್ನು ಕೈಯಲ್ಲಿಟ್ಟುಕೊಂಡು ಸಿಂಹಕ್ಕೆ ಆಟವಾಡಿಸುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ಈ ರೀತಿ ಸತ್ತ ಕೋಳಿಯನ್ನು ಹಿಡಿದು ಆ ಸಿಂಹಕ್ಕೆ ತೋರಿಸಿ ವಿಕೃತ ಖುಷಿ ಪಡುತ್ತಾನೆ. ಈ ಕುರಿತು ಮಾತನಾಡಿರುವ ಮುಖ್ಯ ಅರಣ್ಯಾಧಿಕಾರಿ ಡಿ.ಟಿ.ವಾಸವಾಡ, ಕಳೆದ ತಿಂಗಳು ಇದೇ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ತಕ್ಷಣ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಸಿಂಹ ಕ್ರೂರ ಪ್ರಾಣಿ, ಅದು ಆ ವ್ಯಕ್ತಿಯನ್ನೇ ತಿಂದು ಹಾಕಿಬಿಡಬಹುದಿತ್ತು, ಆದರೆ ಈತ ಅದೆಷ್ಟು ಪಾಪಿ ಎಂದರೆ ಕ್ರೂರ ಪ್ರಾಣಿ ಹತ್ತಿರ ಬಂದು ತಲೆ ಬಾಗಿ ಆಹಾರ ಕೇಳುತ್ತಿದ್ದರೂ ಕೊಡಲಾರದ ಕೀಳು ಪರಿಸ್ಥಿತಿಯಲ್ಲಿದ್ದಾನೆ. ಈ ವಿಡಿಯೋ ನೋಡಿದವರು ವ್ಯಕ್ತಿಯ ವರ್ತನೆಗೆ ಛೀಮಾರಿ ಹಾಕುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...