alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಲ್ಲಿ ಹೂವಲ್ಲ, ಹಾವಿನ ಹಾರ ಬದಲಾಯಿಸಿಕೊಂಡ ವಧು-ವರ

ಹಾವು ಅಂದ್ರೇನೆ ಒಂಥರಾ ಭಯ. ಅವುಗಳನ್ನು ಮುಟ್ಟೋದಂತೂ ದೂರದ ಮಾತು. ಆದ್ರೆ 2010ರಲ್ಲಿ ಯುವ ಜೋಡಿಯೊಂದು ಹಾವನ್ನೇ ಬಳಸಿ ಮದುವೆಯಾಗಿದ್ದರು. ಈ ವಿಡಿಯೋ ಈಗ ಮತ್ತೆ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಈ ವಿಚಿತ್ರ ಕೆಲಸ ಮಾಡಿದವರು 25 ವರ್ಷದ ಸಿದ್ದಾರ್ಥ್ ಸೋನಾವನೆ ಹಾಗೂ 23 ವರ್ಷದ ಸೃಷ್ಟಿ ಔಸರ್ಮಲ್. 2010ರ ನವೆಂಬರ್ 12ರಂದು ಸಿದ್ದಾರ್ಥ್ ಹಾಗೂ ಸೃಷ್ಟಿ ಮದುವೆಯಾಗಿದ್ದಾರೆ. ಮದುವೆಯಲ್ಲಿ ವಧು-ವರರು ಹೂವಿನ ಹಾರ ಬದಲಾಯಿಸಿಕೊಳ್ಳೋದು ಸಾಮಾನ್ಯ.

ಆದ್ರೆ ಸಿದ್ದಾರ್ಥ್ ಹಾಗೂ ಸೃಷ್ಟಿ ಪರಸ್ಪರರ ಕೊರಳಿಗೆ ಹಾವನ್ನೇ ಹಾರವಾಗಿ ಹಾಕಿಕೊಳ್ಳುವ ಮೂಲಕ ವಿವಾಹ ಸಂಪ್ರದಾಯವನ್ನು ನೆರವೇರಿಸಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ವಿಚಿತ್ರ ವಿವಾಹ ನೆರವೇರಿತ್ತು. ಸ್ವಲ್ಪವೂ ಭಯಪಡದೇ ಹಾವನ್ನೇ ಹಾರವಾಗಿ ದಂಪತಿ ಕೊರಳಿಗೆ ಹಾಕಿಕೊಂಡಿದ್ದು ಮಾತ್ರ ವಿಶೇಷವಾಗಿತ್ತು.

ಇಬ್ಬರೂ ವನ್ಯಜೀವಿ ಸಂರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ರು. ಹಾಗಾಗಿ ಸಹಜವಾಗಿಯೇ ಹಾವುಗಳ ಬಗ್ಗೆ ಹೆಚ್ಚು ಭಯವಿರಲಿಲ್ಲ. ಮದುವೆ ಡಿಫರೆಂಟ್ ಆಗಿರಲಿ ಅನ್ನೋ ಕಾರಣಕ್ಕೆ ಹೂವಿನ ಹಾರದ ಬದಲು ಹಾವನ್ನೇ ಹಾರವಾಗಿ ಹಾಕಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...