alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಜಿನ್ ಇಲ್ಲದೇ 10 ಕಿ.ಮೀ. ಓಡಿದ ರೈಲು, ಕಲ್ಲಿಟ್ಟು ನಿಲ್ಲಿಸಿದ ಸಿಬ್ಬಂದಿ

ಭುವನೇಶ್ವರ: ಒಡಿಶಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಂಜಿನ್ ಇಲ್ಲದೇ ರೈಲು ಬರೋಬ್ಬರಿ 10 ಕಿಲೋ ಮೀಟರ್ ಸಂಚರಿಸಿದ್ದು, ಕೊನೆಗೆ ಸಿಬ್ಬಂದಿ ಕಲ್ಲುಗಳನ್ನು ಅಡ್ಡಲಾಗಿಟ್ಟು ರೈಲನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೇ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಅಹಮದಾಬಾದ್ –ಪುರಿ ಎಕ್ಸ್ ಪ್ರೆಸ್ ರೈಲು ಚಿಟ್ಲಾಗ್ರಾ ರೈಲ್ವೇ ನಿಲ್ದಾಣದಲ್ಲಿದ್ದ ಸಂದರ್ಭದಲ್ಲಿ ಇಂಜಿನ್ ಇಲ್ಲದೇ ಹಿಮ್ಮುಖವಾಗಿ ಚಲಿಸಿದೆ. ಅದನ್ನು ತಡೆಯುವ ಪ್ರಯತ್ನ ನಡೆಸಿದರೂ ಫಲಕೊಟ್ಟಿಲ್ಲ. ಇಳಿಜಾರು ಮಾರ್ಗವಾಗಿದ್ದ ಕಾರಣ ರೈಲಿನ ಬೋಗಿಗಳು ವೇಗವನ್ನು ಪಡೆದುಕೊಂಡಿವೆ.

ಸಾಂಬಾಲ್ಪುರ ರೈಲ್ವೇ ವಿಭಾಗದ ಕೇಸಿಂಗಾ ಬಳಿ ರೈಲಿನ ಬೋಗಿಗಳಿಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ನಿಲ್ಲಿಸಲಾಗಿದೆ. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಚೈನ್ ಎಳೆಯುವಂತೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರೈಲಿನ ಇಂಜಿನ ಬದಲಿಸುವ ವೇಳೆಯಲ್ಲಿ ಬೋಗಿಗಳು ಹಿಮ್ಮುಖವಾಗಿ ಚಲಿಸಿವೆ. ಘಟನೆಗೆ ಸಂಬಂಧಿಸಿದಂತೆ ಕೆಲವು ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...