alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿ ದಿನದಂದೇ ಉಪ ಪ್ರಾಂಶುಪಾಲರ ಅಮಾನತು

ದೆಹಲಿಯ ಮಯೂರ್ ವಿಹಾರ್ ಸರ್ಕಾರಿ ಶಾಲೆ ಉಪ ಪ್ರಾಂಶುಪಾಲರನ್ನು ಭ್ರಷ್ಟಾಚಾರದ ಆರೋಪದಲ್ಲಿ ನಿವೃತ್ತಿ ದಿನದಂದೇ ಅಮಾನತ್ತು ಮಾಡಲಾಗಿದೆ.

ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸರ್ಕಾರ ಕಲಿಕಾ ಸಾಮಗ್ರಿಗಳನ್ನು ಕೊಳ್ಳಲು 500 ರೂಪಾಯಿ ನೀಡುತ್ತದೆ. ಆದ್ರೆ ಮಯೂರ್ ಬಡಾವಣೆಯಲ್ಲಿನ ಸರ್ಕಾರಿ ಬಾಲಕಿಯರ ಶಾಲೆಯ ಉಪಪ್ರಾಂಶುಪಾಲರಾದ ಗೋಮತಿ ದೇವಿ, ಸರ್ಕಾರ ನೀಡಿದ ಹಣದಲ್ಲಿ 150 ರೂಪಾಯಿಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಸಹ ಶಿಕ್ಷಕರನ್ನು ವಿಚಾರಿಸಿದಾಗ, 350 ರೂಪಾಯಿಯನ್ನು ಮಾತ್ರ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಉಪ ಪ್ರಾಂಶುಪಾಲರು ಮಾಡಿದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು, ಅಧಿಕಾರಿಗಳಿಗೆ ಆದೇಶಿಸಿದ್ದರು.

ಶಿಕ್ಷಣ ನಿರ್ದೇಶನಾಲಯವು ಗೋಮತಿಯವರಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೆ ತನಿಖೆ ಪೂರ್ಣಗೊಳ್ಳುವವರೆಗೂ ದೆಹಲಿ ಬಿಟ್ಟು ಹೋಗದಂತೆ ಆದೇಶವನ್ನು ಹೊರಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...