alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಗೋ ರಕ್ಷಕರಿಗೆ ಗುರುತಿನ ಚೀಟಿ

cow

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಗೋ ರಕ್ಷಕರಿಗೆ ಗುರುತಿನ ಚೀಟಿ ವಿತರಿಸಲು ನಿರ್ಧರಿಸಿವೆ. ಇತ್ತೀಚೆಗೆ ಗೋ ರಕ್ಷಕರ ಹೆಸರಲ್ಲಿ ಕೆಲವರು ದಲಿತರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ಕೂಡ ನಡೆದಿವೆ. ಇದರಿಂದ ಸಂಘ ಪರಿವಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಹಾಗಾಗಿ ಗೋರಕ್ಷಕರಿಗೆ ಗುರುತಿನ ಕಾರ್ಡ್ ವಿತರಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಗೋ ರಕ್ಷಣಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರಿಗೆ ಐಡಿ ಕಾರ್ಡ್ ವಿತರಿಸಲಾಗುತ್ತದೆ. ಅಷ್ಟೇ ಅಲ್ಲ ಅವರ ಹೆಸರನ್ನು ಪೊಲೀಸ್ ಠಾಣೆಗೆ ನೀಡಲಾಗುತ್ತದೆ. ಇದ್ರಿಂದ ಪೊಲೀಸರಿಗೆ ಪರಿಶೀಲನೆ ಕೂಡ ಸುಲಭವಾಗುತ್ತದೆ. ಸಂಘ ಪರಿವಾರಕ್ಕೂ ಕೆಟ್ಟ ಹೆಸರು ಬರುವುದಿಲ್ಲ ಎಂಬ ಲೆಕ್ಕಾಚಾರ ಹಾಕಲಾಗಿದೆ.

ವಿಎಚ್ ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವುದಿಲ್ಲ. ಅಕ್ರಮವಾಗಿ ಗೋ ಸಾಗಣೆ ಹಾಗೂ ದನದ ಸಾಗಣೆ ಕಂಡು ಬಂದಲ್ಲಿ ಅದನ್ನು ತಡೆಯುತ್ತಾರೆ ಅಷ್ಟೆ. ಸಂಘ ಪರಿವಾರದ ಹೆಸರಿಗೆ ಮಸಿ ಬಳಿಯಲು ಕೆಲವರು ದುಷ್ಕೃತ್ಯ ನಡೆಸುತ್ತಿದ್ದಾರೆ. ಗುರುತಿನ ಚೀಟಿ ವಿತರಣೆ ಮಾಡಿದ ಬಳಿಕ ಅವರ ಬಣ್ಣ ಬಯಲಾಗಲಿದೆ ಅಂತಾ ವಿ ಎಚ್ ಪಿ ಉಪಾಧ್ಯಕ್ಷ ಹೇಮಂತ್ ಜಾಂಬೇಕರ್ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...