alex Certify
ಕನ್ನಡ ದುನಿಯಾ       Mobile App
       

Kannada Duniya

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಇನ್ನಿಲ್ಲ

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಇಹಲೋಕ ತ್ಯಜಿಸಿದ್ದಾರೆ. 93 ವರ್ಷದ ಕುಲದೀಪ್ ನಯ್ಯರ್ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ರಾಜ್ಯಸಭೆ ಸದಸ್ಯರಾಗಿಯೂ ಕೆಲಸ ಮಾಡಿದ್ದ ಕುಲದೀಪ್ ನಯ್ಯರ್, ಲೇಖಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು.

ಬುಧವಾರ ದೆಹಲಿಯ ಎಸ್ಕಾಟ್ರ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ಅವ್ರ ಮಗ ತಿಳಿಸಿದ್ದಾರೆ. ಕುಲದೀಪ್ ನಯ್ಯರ್, 1990 ರಲ್ಲಿ ಬ್ರಿಟನ್ ಗೆ ಭಾರತದ ಹೈ ಕಮಿಷನರ್ ಆಗಿ ನೇಮಕಗೊಂಡಿದ್ದರು. ಆಗಸ್ಟ್ 14, 1924 ರಲ್ಲಿ ಸಿಯಾಲ್ಕೋಟ್ ( ಈಗಿನ ಪಾಕಿಸ್ತಾನ)ದಲ್ಲಿ  ಜನಿಸಿದ್ದರು. ಸಿಯಾಲ್ಕೋಟ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಅವ್ರು, ಲಾಹೋರ್ ನಲ್ಲಿ ಪತ್ರಿಕೋದ್ಯಮ ಪದವಿ ಮಾಡಿದ್ದರು. ಅವ್ರ ಲೇಖನ ದೇಶದ 80 ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಕುಲದೀಪ್ ನಯ್ಯರ್ ಅಂತ್ಯಕ್ರಿಯೆ ಇಂದು ದೆಹಲಿಯ ಲೋಧಿ ರಸ್ತೆಯಲ್ಲಿರುವ ಚಿತಾಗಾರದಲ್ಲಿ ನಡೆಯಲಿದೆ. ಕುಲದೀಪ್ ನಯ್ಯರ್ 12 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಉತ್ತಮ ಲೇಖನದ ಮೂಲಕ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ನಯ್ಯರ್, ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...