alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮಿ ವಿರುದ್ದ ನಟಿಯಿಂದ ಲೈಂಗಿಕ ಕಿರುಕುಳದ ದೂರು

70-80 ರ ದಶಕದ ಖ್ಯಾತ ನಟಿ ಜೀನತ್ ಅಮಾನ್ ಉದ್ಯಮಿಯೊಬ್ಬರ ವಿರುದ್ದ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಒಡ್ಡಿರುವ ಕುರಿತು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕುಟುಂಬಕ್ಕೆ ಚಿರಪರಿಚಿತನಾಗಿದ್ದ ಉದ್ಯಮಿ ಅಮರ್ ಖನ್ನಾ ವಿರುದ್ದ ಜೀನತ್ ಅಮಾನ್ ದೂರು ದಾಖಲಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಪದೇ ಪದೇ ಫೋನ್ ಮಾಡಿ ಹಾಗೂ ಮೆಸೇಜ್ ಮೂಲಕ ಬೆದರಿಕೆಯೊಡ್ಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ನಟ ಮಜರ್ ಖಾನ್ ಜೊತೆ ಜೀನತ್ ಅಮಾನ್ ವಿವಾಹವಾಗಿದ್ದು, ಅನಾರೋಗ್ಯಕ್ಕೊಳಗಾಗಿದ್ದ ಮಜರ್ ಖಾನ್ 1998 ರಲ್ಲಿ ನಿಧನರಾದ ಬಳಿಕ ಒಬ್ಬಂಟಿಯಾಗಿದ್ದರು. ಉದ್ಯಮಿ ಅಮರ್ ಖನ್ನಾ ಹಾಗೂ ಜೀನತ್ ಅಮಾನ್ ಕುಟುಂಬ ಪರಸ್ಪರ ಪರಿಚಿತರಾಗಿದ್ದು, ಕೆಲ ತಿಂಗಳ ಹಿಂದೆ ಎರಡೂ ಕುಟುಂಬಗಳು ಮನಸ್ತಾಪದ ಕಾರಣಕ್ಕೆ ಮಾತುಕತೆ ನಿಲ್ಲಿಸಿದ್ದರೆನ್ನಲಾಗಿದೆ.

ಆದರೆ ಜೀನತ್ ಅಮಾನ್ ಜೊತೆ ಮಾತನಾಡಲು ಹಾತೊರೆಯುತ್ತಿದ್ದ ಅಮರ್ ಖನ್ನಾ, ಒಮ್ಮೆ ಅವರ ಮನೆ ಪ್ರವೇಶಿಸಲು ಹೋದಾಗ ಸೆಕ್ಯುರಿಟಿ ಗಾರ್ಡ್ ತಡೆದನೆಂಬ ಕಾರಣಕ್ಕೆ ಆತನೊಂದಿಗೆ ಜಗಳವಾಡಿದ್ದರೆನ್ನಲಾಗಿದೆ. ತನ್ನ ವಿರುದ್ದ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಅಮರ್ ಖನ್ನಾ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...