alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿಗಳ ಕಾರಿಗೂ ನೋಂದಣಿ ಸಂಖ್ಯೆ ಕಡ್ಡಾಯ

ಕಾರಿನ ನೋಂದಣಿ ಸಂಖ್ಯೆ ಎಲ್ಲರಿಗೂ ಕಡ್ಡಾಯ ಎಂದು ದೆಹಲಿ ಹೈಕೋರ್ಟ್‌ ಆದೇಶಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿದ್ದು, ರಾಷ್ಟ್ರದ ಪ್ರಮುಖ ವ್ಯಕ್ತಿಗಳೆಂದು ಗುರುತಿಸಿಕೊಂಡರೂ ಅವರ ಕಾರುಗಳಿಗೆ ಸಾರಿಗೆ ಇಲಾಖೆಯಿಂದ ನೀಡುವ ನೋಂದಣಿ ಸಂಖ್ಯೆ ನಮೂದಿಸುವುದು ಕಡ್ಡಾಯ. ಎಲ್ಲ ವಾಹನಗಳು ತಮ್ಮ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುವಂತೆ ಹಾಕಬೇಕು ಎಂದು ಕೋರ್ಟ್‌ ಆದೇಶಿಸಿದೆ.

ನೋಂದಣಿ ಸಂಖ್ಯೆಯ ಬದಲಾಗಿ ರಾಷ್ಟ್ರದ ಸಂಕೇತವನ್ನು ಮಾತ್ರ ನಮೂದಿಸುವುದರಿಂದ ಭದ್ರತೆಗೆ ತೊಡಕಾಗುತ್ತದೆ. ಭಯೋತ್ಪಾದಕ ಸಂಘಟನೆಗಳು ಸುಲಭವಾಗಿ ಕಾರನ್ನು ಪತ್ತೆ ಹಚ್ಚುತ್ತಾರೆ. ಹೀಗಾಗಿ ಎಲ್ಲ ವಿವಿಐಪಿ, ಸಾಂವಿಧಾನಿಕ ಹುದ್ದೆಯಲ್ಲಿರುವವರ ಕಾರುಗಳಿಗೆ ನೋಂದಣಿ ಸಂಖ್ಯೆ ನಮೂದಿಸಬೇಕು ಎಂದು ಸರ್ಕಾರೇತರ ಸಂಸ್ಥೆ(ಎನ್‌ಜಿಒ) ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ರಾಷ್ಟ್ರಪತಿ ಭವನದ 14 ಕಾರುಗಳಲ್ಲಿ ನೋಂದಣಿ ಸಂಖ್ಯೆ ಇಲ್ಲ. ಇದು ಶಿಷ್ಟಾಚಾರ ವಿಭಾಗ ನಿರ್ವಹಿಸುತ್ತಿದ್ದು, ನೋಂದಣಿ ಸಂಖ್ಯೆ ನಮೂದಿಸುವುದು ಭದ್ರತೆಗೆ ತೊಡಕಾಗುತ್ತದೆ. ನೋಂದಣಿ ಸಂಖ್ಯೆಯನ್ನು ಬಳಸಿ ಇನ್ನಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ವಾದಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...