alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನಗಳಿಗೂ ಬಂತು ನಂಬರ್ ಪೋರ್ಟಬಿಲಿಟಿ…!

ಮೊಬೈಲ್ ಸೇವಾ ಕಂಪನಿಯನ್ನು ಬದಲಾಯಿಸಿದರೂ ಹಳೆ ನಂಬರ್ ನ್ನು ಹಾಗೆಯೇ ಉಳಿಸಿಕೊಳ್ಳುವ ಸಲುವಾಗಿ ಮೊಬೈಲ್ ಪೋರ್ಟಬಿಲಿಟಿ ಜಾರಿ ಮಾಡಲಾಗಿತ್ತು. ಇದರಿಂದಾಗಿ ಎಲ್ಲರಿಗೂ ಅನುಕೂಲವಾಗಿತ್ತು. ಮೊಬೈಲ್ ಸೇವಾ ಕಂಪನಿ ಬದಲಾದರೂ ಹಳೆ ನಂಬರ್ ಹಾಗೆಯೇ ಇರುತ್ತಿದ್ದ ಕಾರಣ ಸಂಪರ್ಕಕ್ಕೆ ಅನುಕೂಲವಾಗಿತ್ತು.

ಇದೇ ರೀತಿ ಸೌಲಭ್ಯವನ್ನು ಬ್ಯಾಂಕ್ ಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದ್ದು, ಯಾವುದೇ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರು ಮತ್ತೊಂದು ಬ್ಯಾಂಕ್ ಗೆ ತಮ್ಮ ಖಾತೆಯನ್ನು ವರ್ಗಾಯಿಸಿದರೂ ಅದೇ ಖಾತೆ ನಂಬರ್ ಉಳಿಸಿಕೊಳ್ಳುವ ಸೌಲಭ್ಯ ಜಾರಿಗೆ ಬರುವ ಚಿಂತನೆ ನಡೆದಿದೆ.

ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರ ವಾಹನಗಳಿಗೂ ನಂಬರ್ ಪೋರ್ಟಬಿಲಿಟಿ ಸೌಲಭ್ಯ ವಿಸ್ತರಿಸಲು ಮುಂದಾಗಿದ್ದು, ಹೊಸ ವಾಹನ ಖರೀದಿಸಿದವರು ತಮ್ಮ ಹಿಂದಿನ ವಾಹನದ ಅಥವಾ ಗುಜರಿ ಸೇರಿರುವ ವಾಹನದ ತಮ್ಮಿಷ್ಟದ ನಂಬರ್ ಉಳಿಸಿಕೊಳ್ಳಬಹುದಾಗಿದೆ. ಕಾರು, ಬೈಕ್, ಸ್ಕೂಟರ್ ಸೇರಿದಂತೆ ಖಾಸಗಿ ವಾಹನಗಳಿಗೆ ಈ ಸೌಲಭ್ಯ ನೀಡಲಿದ್ದು, ಇದರ ಅನ್ವಯ ಕಾರು ಖರೀದಿಸಿದ ವ್ಯಕ್ತಿ ತನ್ನ ಸ್ಕೂಟರ್ ಅಥವಾ ಬೈಕ್ ಗೆ ಇದ್ದ ಲಕ್ಕಿ ನಂಬರನ್ನು ಹೊಸ ವಾಹನಕ್ಕೆ ಪಡೆದುಕೊಳ್ಳಬಹುದಾಗಿದೆ. ಹಳೆ ಸ್ಕೂಟರ್ ಅಥವಾ ಬೈಕ್ ಗೆ ಚಾಲ್ತಿಯಲ್ಲಿರುವ ಹೊಸ ನೋಂದಣಿ ನಂಬರ್ ನೀಡಲಾಗುತ್ತದೆ. ಇದೇ ರೀತಿ ಕಾರ್ ಗಿದ್ದ ನಂಬರ್ ನ್ನು ಹೊಸ ಸ್ಕೂಟರ್ ಅಥವಾ ಬೈಕ್ ಗೆ ಪಡೆಯಬಹುದಾಗಿದೆ. ದ್ವಿಚಕ್ರ ವಾಹನದಿಂದ ಮತ್ತೊಂದು ದ್ವಿಚಕ್ರ ವಾಹನಕ್ಕೆ ನಂಬರ್ ಪೋರ್ಟ್ ಮಾಡಿಸಿಕೊಳ್ಳಲು 25 ಸಾವಿರ ರೂ. ಹಾಗೂ ದ್ವಿಚಕ್ರ ವಾಹನದಿಂದ ನಾಲ್ಕು ಚಕ್ರದ ವಾಹನಕ್ಕೆ ನಂಬರ್ ಪೋರ್ಟ್ ಮಾಡಿಕೊಳ್ಳಲು 50 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...