alex Certify
ಕನ್ನಡ ದುನಿಯಾ       Mobile App
       

Kannada Duniya

1 ಕೆ.ಜಿ. ಟೊಮೊಟೊ, ಸೇಬು ಹಣ್ಣಿಗೆ 1 ರೂ…!

pak-8

ತರಕಾರಿ ಸಗಟು ವ್ಯಾಪಾರಿ ಪರೇಶ್ ಪಟೇಲ್ ಹಾಗೂ ಹೆಲ್ಪಿಂಗ್ ಹ್ಯಾಂಡ್ ಹೆಸರಿನ ಎನ್ಜಿಒ, ಒಂದು ರೂಪಾಯಿಗೆ ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 28 ರಂದು ಅಹಮದಾಬಾದ್ ನ ಕಾನ್ಪುರ ರೈಫಲ್ ಗ್ರೌಂಡ್ ನಲ್ಲಿ ಶಿಬಿರವೊಂದನ್ನು ಆಯೋಜನೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ತರಕಾರಿ ಹಾಗೂ ಹಣ್ಣುಗಳ ಬೆಲೆ ದುಬಾರಿಯಾಗಿದೆ. ಸಾರ್ವಜನಿಕರಿಗೆ ತರಕಾರಿ ಖರೀದಿ ಸಾಧ್ಯವಾಗ್ತಿಲ್ಲ. ಬಡವರು ಕೂಡ ಎಲ್ಲ ರೀತಿಯ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗ್ತಿದೆ ಎಂದು ಪರೇಶ್ ಪಟೇಲ್ ಹೇಳಿದ್ದಾರೆ.

ಜಮಾಲ್ಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಪರೇಶ್ ತರಕಾರಿ ಅಂಗಡಿ ನಡೆಸುತ್ತಿದ್ದಾರೆ. ಈ ಶಿಬಿರಕ್ಕಾಗಿ 12 ಟ್ರಕ್ ಹಣ್ಣು ಹಾಗೂ ತರಕಾರಿಗಳನ್ನು ಆರ್ಡರ್ ಮಾಡಲಾಗಿದೆ. ಪ್ರತಿ ವ್ಯಕ್ತಿಗೆ ಒಂದು ಪ್ಯಾಕ್ ನೀಡಲಾಗುವುದೆಂದು ಪರೇಶ್ ಹೇಳಿದ್ದಾರೆ. ಯೋಗ ಶಿಕ್ಷಕರಾಗಿಯೂ ಕೆಲಸ ಮಾಡುವ ಪರೇಶ್, ಪ್ಯಾಕೆಟ್ ನಲ್ಲಿ ಕೋಸು, ಬಿಳಿಬದನೆ, ಟೊಮೊಟೊ, ಸೇಬುಹಣ್ಣು, ಬಾಳೆಹಣ್ಣು ಹಾಗೂ ಹೂಕೋಸಿರಲಿದೆ ಎಂದಿದ್ದಾರೆ. ಇದನ್ನು ನೇರವಾಗಿ ರೈತರಿಂದ ಖರೀದಿ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...