alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ಥಾನದಲ್ಲೂ ಈಗ ಸಾಲಮನ್ನಾದ ಮಾತು

ಕರ್ನಾಟಕದಲ್ಲಿ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಕುಮಾರ ಸ್ವಾಮಿ ಸರ್ಕಾರ ರೈತರಿಗೆ ಸಾಲಮನ್ನಾದ ಯೋಜನೆಯನ್ನ ಘೋಷಿಸಿದೆ. ಅದೇ ರೀತಿಯಲ್ಲಿ ಈಗ ರಾಜಸ್ಥಾನ ಸರ್ಕಾರ ಕೂಡ ಸಾಲಮನ್ನಾದ ಯೋಜನೆ ಘೋಷಣೆ ಮಾಡಿದೆ.

ರಾಜಸ್ಥಾನದ ಸಿಎಂ ವಸುಂಧರಾ ರಾಜೇ 12,000 ಬುಡಕಟ್ಟು ಸಮುದಾಯದ ರೈತರ ಸಂಪೂರ್ಣ ಸಾಲಮನ್ನಾ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ದಕ್ಷಿಣ ರಾಜಸ್ಥಾನದಲ್ಲಿ ಹೆಚ್ಚಿರುವ ಬುಡಕಟ್ಟು ಸಮುದಾಯದ 15,000 ಎಕರೆ ಕೃಷಿಭೂಮಿಗೆ ಸಂಬಂಧಿಸಿದ ಸಾಲ ಪತ್ರ ಹಲವು ಕೋ ಆಪರೇಟಿವ್ ಬ್ಯಾಂಕ್ ಗಳ ಬಳಿ ಇದೆ.

ಕಳೆದ ನಾಲ್ಕು ವರ್ಷಗಳಲ್ಲಿ 100 ಕ್ಕೂ ಹೆಚ್ಚು ರೈತರು ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಾಗ್ಲೇ ರಾಜಸ್ಥಾನದ ಬಜೆಟ್ ಘೋಷಣೆ ಸಂದರ್ಭದಲ್ಲಿ ವಸುಂಧರಾ ರಾಜೇ ರಾಜಸ್ಥಾನದ 29 ಲಕ್ಷ ಮಂದಿ ರೈತರ ಬೆಳೆ ಸಾಲ ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ದರು. ಅದಕ್ಕಾಗಿ ಬಜೆಟ್ ನಲ್ಲಿ 800 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರು. ಈಗ ಬುಡಕಟ್ಟು ಸಮುದಾಯದವರ ಬೆಳೆ ಸಾಲ ಮನ್ನಾ ಮಾಡ್ತಿರೋದ್ರಿಂದ ಬೊಕ್ಕಸಕ್ಕೆ 100 ಕೋಟಿ ರೂಪಾಯಿ ಹೆಚ್ಚಿನ ಹೊರೆ ಬೀಳಲಿದೆ.

ಆದ್ರೆ ರೈತರು ಸಾಲಮನ್ನಾ ಯೋಜನೆಯಿಂದ ಮಾತ್ರ ಕಷ್ಟ ಪರಿಹಾರ ಸಾಧ್ಯವಿಲ್ಲ. ಸ್ವಾಮಿನಾಥನ್ ಆಯೋಗ ನೀಡಿರುವ ವರದಿಯ ಆಧಾರದ ಮೇಲೆ ಬೆಳೆಗಳಿಗೆ ಹೆಚ್ಚು ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಅಂತ ಪಟ್ಟು ಹಿಡಿದಿದ್ದಾರೆ. ವಿಪಕ್ಷವಾದ ಕಾಂಗ್ರೆಸ್ ಕೂಡ ವಸುಂಧರಾ ರಾಜೇ ಸರ್ಕಾರ ಚುನಾವಣೆಗೆ ಇನ್ನು 3 ತಿಂಗಳಿರುವಾಗ ಈ ಯೋಜನೆಯನ್ನ ಜಾರಿ ಸಾಧ್ಯವಿಲ್ಲ, ಹಾಗಿದ್ದರು ಬಿಜೆಪಿ ಜನರಲ್ಲಿ ಸೆಳೆಯೋದಕ್ಕೆ ಸಾಲಮನ್ನಾದ ನೆಪ ಹೇಳ್ತಿದೆ ಅಂತ ಆರೋಪಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...