alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಕಿ ಜೊತೆ ಸೆಣೆಸಲು ರಾಯಲ್ ಎನ್ ಫೀಲ್ಡ್ ಬೈಕ್

royal-enfieldಮುಂಬೈನಲ್ಲಿ ಅಗ್ನಿಶಾಮಕ ಸಿಬ್ಬಂದಿಯೆಲ್ಲ ಇನ್ಮೇಲೆ ರಾಯಲ್ ಎನ್ ಫೀಲ್ಡ್ ಬೈಕ್ ಏರಿ ಬರುತ್ತಾರೆ. ವಸೈ ವಿಹಾರ್ ಮುನ್ಸಿಪಲ್ ಕಾರ್ಪೊರೇಶನ್ ನ ಅಗ್ನಿಶಾಮಕ ದಳಕ್ಕೆ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ನೀಡಲಾಗಿದೆ.

ಬೈಕ್ ನಲ್ಲಿ ಬೆಂಕಿ ನಂದಿಸಲು ಬೇಕಾದ ಎಲ್ಲ ಸಲಕರಣೆಗಳನ್ನು ಇಡಲಾಗಿದೆ. ಬೆಂಕಿ ನಂದಿಸಲು ಬೇಕಾದ 10 ಲೀಟರ್ ಸಾಮರ್ಥ್ಯದ ಎರಡು ಬ್ಯಾಕ್ ಪ್ಯಾಕ್ ಗಳು ಇದರಲ್ಲಿವೆ. ಪ್ರಮುಖವಾಗಿ ನಗರದ ಕಿರಿದಾದ ರಸ್ತೆಗಳಲ್ಲಿ ಈ ಬೈಕ್ ಫೈರ್ ಎಂಜಿನ್ ಗಳನ್ನು ಬಳಸಿಕೊಳ್ಳಲಾಗುತ್ತದೆ.

ಬೆಂಕಿ ನಂದಿಸಲು ನೀರು ಮತ್ತು ಮಂಜು ಮಿಶ್ರಿತ ಸ್ಪ್ರೇ ಬಳಸಲಾಗುತ್ತದೆ. ಮಂಜು ಮಿಶ್ರಿತ ನೀರು ಆವಿಯನ್ನು ಸೃಷ್ಟಿಸುವ ಮೂಲಕ ಬೆಂಕಿಯನ್ನು ನಿಷ್ಕ್ರಿಯಗೊಳಿಸುತ್ತದೆ. ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ, ಬೇಗನೆ ಬೆಂಕಿ ನಂದಿಸಲು ಕೂಡ ಸಹಾಯ ಮಾಡುತ್ತದೆ.

ನೀರು ಮತ್ತು ಮಂಜಿನ ಜೊತೆ ಕಂಪ್ರೆಸ್ಡ್ ಏರ್ ಫೋಮ್ ಬಳಸುವುದರಿಂದ ತ್ವರಿತಗತಿಯಲ್ಲಿ ಬೆಂಕಿ ನಂದಿಸಬಹುದು. ಪ್ರತಿ ಮೋಟಾರ್ ಬೈಕ್ ಗೂ ಸುಮಾರು 5.30 ಲಕ್ಷ ರೂಪಾಯಿ ವೆಚ್ಚವಾಗಿದೆ. ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಹಾಗೂ ಸಣ್ಣ ರಸ್ತೆಗಳಿರುವೆಡೆ ರಾಯಲ್ ಎನ್ ಫೀಲ್ಡ್ ಬೈಕ್ ಮೂಲಕ ವೇಗವಾಗಿ ಹೋಗಬಹುದು ಅನ್ನೋ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...