alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿನಾಯಿಗಳ ಹಾವಳಿ ಸಂಬಂಧ ದಂಡ ವಿಧಿಸಿದ ಮಾನವ ಹಕ್ಕುಗಳ ಆಯೋಗ

ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳದ ಕಾರಣಕ್ಕಾಗಿ ವಸೈ ಮುನಿಸಿಪಲ್ ಕಾರ್ಪೊರೇಷನ್ ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ಐದು ವರ್ಷದ ಬಾಲಕನ ರಾಮ್ ಭಂಡಾರಿ ಲಾಲ್ ಪ್ರಜಾಪತಿ ಎಂಬ ಐದು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು.

ಈ ವೇಳೇ ಬಾಲಕನ ಮೇಲ್ವಿಚಾರಣೆ ನೋಡಿಕೊಳ್ಳುವ ಹೊಣೆಯನ್ನ ಮುನಿಸಿಪಲ್ ಕಾರ್ಪೊರೇಷನ್ ನ ಸತೀಶ್ ಲೋಖಂಡೆ ಅವರಿಗೆ ವಹಿಸಲಾಗಿತ್ತು. ತಾಯಿ ಮರಣದ ನಂತರ ತಂದೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಬೆಳೆಯುತ್ತಿದ್ದ ಐದು ವರ್ಷದ ಬಾಲಕ ರಸ್ತೆಯಲ್ಲಿನ ಕಸವನ್ನು ಆಯುವ ಕೆಲಸ ಮಾಡ್ತಿದ್ದ. ಈ ವೇಳೆ ಅವನು ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದ.

ಹಾಗಾಗಿ ಮುನಿಸಿಪಲ್ ಕಾರ್ಪೊರೇಷನ್ ಗೆ ಬಾಲಕನ ಜವಾಬ್ದಾರಿ ಹೊರಿಸಲಾಗಿತ್ತು. ಅವನ ಚಿಕಿತ್ಸಾ ವೆಚ್ಚವನ್ನು ನೋಡಿಕೊಂಡು, ಆತನಿಗೆ ಪರಿಹಾರ ಮೊತ್ತ ನೀಡುವಂತೆ ಸೂಚಿಸಲಾಗಿತ್ತು. ಬಾಲಕನ ಹೆಸರಲ್ಲಿ ಠೇವಣಿ ಹಣ ಇಡುವಂತೆಯೂ ನಿರ್ದೇಶನ ನೀಡಲಾಗಿತ್ತು. ಈ ಸೂಚನೆಯನ್ನು ನಿರ್ಲಕ್ಷಿಸಿದ ಕಾರಣಕ್ಕಾಗಿ ವಸೈ ಮುನಿಸಿಪಲ್ ಕಾರ್ಪೊರೇಷನ್ ಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...