alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಅಧಿಕಾರಿಯಾಗುವ ಅವಕಾಶ ಗಿಟ್ಟಿಸಿಕೊಂಡ ಬಾಲಕಿಯರು…!

ಯಾವುದೇ ಪರೀಕ್ಷೆ, ಕಸರತ್ತುಗಳಿಲ್ಲದೇ, ಪೊಲೀಸ್ ಅಧಿಕಾರಿಯಾಗುವ ಛಾನ್ಸ್ ಸಿಕ್ಕಿದರೆ ಖುಷಿ ಅನಿಸಲ್ವಾ…? ವಾರಾಣಸಿಯಲ್ಲಿ 15 ಮಂದಿ ಬಾಲಕಿಯರಿಗೆ ಒಮ್ಮೆಗೆ ಪೊಲೀಸ್ ಅಧಿಕಾರಿಯಾಗುವ ಅವಕಾಶ ಸಿಕ್ಕಿದೆ. ಪೊಲೀಸ್ ಅಧಿಕಾರಿಗಳೆಲ್ಲಾ ಈ ಬಾಲಕಿಯರು ನೀಡುವ ಸಲಹೆ ಸೂಚನೆ, ಆದೇಶಗಳನ್ನು ಪಾಲಿಸಿದ್ದಾರಂತೆ. ಇದೇನಪ್ಪಾ ವಿಚಿತ್ರ ಅಂದುಕೊಂಡ್ರಾ…? ಹಾಗಾದ್ರೆ ಈ ಸುದ್ದಿ ನೋಡಿ.

ಅಂತಾರಾಷ್ಟ್ರೀಯ ಹೆಣ್ಣುಮಗು ದಿನದ ಸಲುವಾಗಿ ವಾರಾಣಸಿ ಪೊಲೀಸರು ವಿಭಿನ್ನ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಒಂದು ದಿನದ ಮಟ್ಟಿಗೆ ವಾರಾಣಸಿ ನಗರದ ಕಮೀಷನರ್ ವ್ಯಾಪ್ತಿಯ 15 ಪೊಲೀಸ್ ಠಾಣೆಗಳ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಬಾಲಕಿಯರಿಗೆ ವಹಿಸಿಕೊಡಲಾಯಿತು. ಈ ಬಾಲಕಿಯರು ನೀಡಿದ ಸೂಚನೆ ಆದೇಶಗಳನ್ನು ಪೊಲೀಸರು ಪಾಲಿಸಿದರು.

ಈ ಕಾರ್ಯಕ್ರಮದ ಮೂಲಕ ಬಾಲಕಿಯರಿಗೆ ಪೊಲೀಸ್ ಇಲಾಖೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಪರಿಚಯ ಮಾಡಿಕೊಡುವುದರ ಜತೆಗೆ ಬಾಲಕಿಯರಿಗೆ ಧೈರ್ಯ, ಸಾಹಸ ಪ್ರವೃತ್ತಿಯನ್ನು ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಈ ಅವಕಾಶವನ್ನು ಬಾಲಕಿಯರಿಗೆ ನೀಡಲಾಯಿತು. ವಾರಾಣಸಿ ಪೊಲೀಸ್, ಶಂಭುನಾಥ ಸಿಂಗ್ ರಿಸರ್ಚ್ ಫೌಂಡೇಶನ್ ಮತ್ತು ಸಿಆರ್ವೈ ಫೌಂಡೇಶನ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...