alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಣಾಸಿಯಲ್ಲಿ ಮೋದಿ ನಾಪತ್ತೆ ಪೋಸ್ಟರ್

modi2

ಉತ್ತರ ಪ್ರದೇಶದ ವಾರಣಾಸಿಯ ಬೀದಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಪತ್ತೆಯಾಗಿದ್ದಾರೆಂಬ ಪೋಸ್ಟರ್ ಹಾಕಲಾಗಿದೆ. ಮೋದಿ ವಾರಣಾಸಿ ಕ್ಷೇತ್ರದ ಸಂಸದರಾಗಿದ್ದಾರೆ. ಬೀದಿ ಬದಿಯಲ್ಲಿ ಹಾಕಿರುವ ಪೋಸ್ಟರ್ ಒಂದರಲ್ಲಿ ಮೋದಿ ನಾಪತ್ತೆಯಾಗಿದ್ದಾರೆಂದು ಬರೆಯಲಾಗಿದೆ.

ಮೋದಿ ಫೋಟೋ ಜೊತೆಗೆ ನಾಪತ್ತೆಯಾದ ವಾರಣಾಸಿ ಸಂಸದ ಎಂದು ಬರೆಯಲಾಗಿದ್ದು, ಹತಾಶೆ, ನಿರಾಶೆ ಹಾಗೂ ಅಸಹಾಯಕತೆಯಲ್ಲಿ ಕಾಶಿ ಜನರು ಎಂದು ಕೊನೆಯಲ್ಲಿ ಬರೆಯಲಾಗಿದೆ. ಆದ್ರೆ ಯಾರು ಈ ಪೋಸ್ಟರ್ ಹಾಕಿದ್ದಾರೆನ್ನುವ ಬಗ್ಗೆ ಇಲ್ಲಿ ಉಲ್ಲೇಖವಿಲ್ಲ.

ಪೋಸ್ಟರ್ ಸುದ್ದಿ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿತ್ತು. ತಡರಾತ್ರಿ ಸ್ಥಳಕ್ಕೆ ಬಂದ ಪೊಲೀಸರು ಪೋಸ್ಟರ್ ತೆಗೆದು ಹಾಕಿದ್ದಾರೆ. ಪೋಸ್ಟರ್ ಯಾರು ಹಾಕಿದ್ದಾರೆನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಇದಕ್ಕೂ ಮೊದಲು ರಾಹುಲ್ ಗಾಂಧಿ ಕ್ಷೇತ್ರ ಅಮೇಥಿಯಲ್ಲಿ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆಂಬ ಪೋಸ್ಟರ್ ಹಾಕಲಾಗಿತ್ತು. ಬೀದಿ ಬೀದಿಗಳಲ್ಲಿ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆಂಬ ಪೋಸ್ಟರ್ ರಾರಾಜಿಸುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...