alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ ರಾಖಿ ಕಳುಹಿಸಿದ್ದಾರೆ ವಾರಣಾಸಿ ಮುಸ್ಲಿಂ ಮಹಿಳೆಯರು

untitled-design-1-45

ವಾರಣಾಸಿ ಮುಸ್ಲಿಂ ಮಹಿಳೆಯರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಕೈನಲ್ಲಿ ರಾಖಿ ಸಿದ್ಧಪಡಿಸಿ ಪ್ರಧಾನಿ ಮೋದಿಗೆ ಕಳುಹಿಸಿದ್ದಾರೆ. ರಾಖಿ ಜೊತೆಗೆ ಪತ್ರವನ್ನು ಬರೆದಿರುವ ಮಹಿಳೆಯರು ಕಾಶಿ ಅವ್ಯವಸ್ಥೆ ಸರಿಮಾಡುವ ಜೊತೆಗೆ ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ಹೋರಾಡುವಂತೆ ಪತ್ರದಲ್ಲಿ ಹೇಳಿದ್ದಾರೆ.

ಮೋದಿ, ರಾಖಿಯ ನೈತಿಕ ಬಲದಿಂದ ಚೀನಾ ವಿರುದ್ಧ ಸ್ಪರ್ಧೆ ನಡೆಸಲಿದ್ದಾರೆ ಎಂದು ಮುಸ್ಲಿಂ ಮಹಿಳಾ ಫೌಂಡೇಶನ್ ಅಧ್ಯಕ್ಷೆ ನಜ್ನೀರ್ ಅನ್ಸಾರಿ ಹೇಳಿದ್ದಾರೆ. 2013ರಿಂದಲೂ ಈ ಮಹಿಳೆಯರು ಮೋದಿಗೆ ರಾಖಿ ಕಳುಹಿಸುತ್ತಿದ್ದಾರಂತೆ. ಗುಜರಾತ್ ಸಿಎಂ ಆದಾಗ್ಲೂ ಮಹಿಳೆಯರು ರಾಖಿ ಕಳುಹಿಸುತ್ತಿದ್ದು, ಪತ್ರ ಬರೆದು ಮೋದಿ ಧನ್ಯವಾದ ಹೇಳುತ್ತಿದ್ದರಂತೆ. ನಜ್ನೀರ್ ಮೋದಿ ಭೇಟಿಗೆ ಅವಕಾಶ ಕೋರಿದ್ದಾರೆ.

ಪಾಕಿಸ್ತಾನ ಹಾಗೂ ಚೀನಾವನ್ನು ವಿರೋಧಿಸಿ ವಾರಣಾಸಿಯ ಬೇರೆ ಸಂಘಟನೆ ಮುಸ್ಲಿಂ ಮಹಿಳೆಯರು ಕೂಡ ದೇಶಿಯ ವಸ್ತು ಬಳಸಿ ರಾಖಿ ತಯಾರಿಸಿ ಕಳುಹಿಸಲಿದ್ದಾರೆ. ಹಾಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗೂ ರಾಖಿ ಕಳುಹಿಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...