alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನ ಸಾವಿನ ಸೇಡು ತೀರಿಸಿಕೊಳ್ಳಲು ಊಟದಲ್ಲಿ ವಿಷ ಬೆರೆಸಿದ ವಿದ್ಯಾರ್ಥಿನಿ?

ಉತ್ತರ ಪ್ರದೇಶದ ಗೋರಕ್ ಪುರ್ ನಲ್ಲಿ ತಮ್ಮನ ಕೊಲೆಗೆ ಪ್ರತಿಯಾಗಿ ಶಾಲಾ ಬಾಲಕಿ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ವಿಷ ಬೆರೆಸಿದ್ದಾಳೆಂಬ ಆರೋಪ ಕೇಳಿ ಬಂದಿದೆ. ಅಡುಗೆ ಮಾಡುತ್ತಿದ್ದ ಮಹಿಳೆ, ತಾನು ತಯಾರಿಸಿದ ಊಟದಲ್ಲಿ ಬಾಲಕಿ ವಿಷ ಬೆರೆಸಿರುವದಾಗಿ ಅನುಮಾನಿಸಿ, ಶಾಲಾ ವ್ಯವಸ್ಥಾಪಕರಿಗೆ ದೂರು ನೀಡಿದ್ದಾಳೆ.

ಈ ಸಂಬಂಧ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶಾಲೆಗೆ ಆಹಾರ ಮತ್ತು ಔಷಧ ಆಡಳಿತ ವಿಭಾಗದ ಅಧಿಕಾರಿಗಳ ಜೊತೆ ಭೇಟಿ ಕೊಟ್ಟಿದ್ದಾರೆ. ಮುನ್ನೆಚ್ಚರಿಕೆಯಿಂದ ಪೊಲೀಸರು ವೈದ್ಯರನ್ನು ಸಹ ಕರೆ ತಂದಿದ್ರು. ಆದ್ರೆ, ಆಹಾರವನ್ನು ಮಕ್ಕಳಿಗೆ ನೀಡಿರಲಿಲ್ಲ.

ಶಾಲೆಯಲ್ಲಿ ತಯಾರಾದ ಆಹಾರದ ಸ್ಯಾಂಪಲ್ ನ್ನು ಅಧಿಕಾರಿಗಳು ಪಡೆದಿದ್ದು, ವರದಿ ಬಂದ ಬಳಿಕವೇ ಸತ್ಯಾಸತ್ಯತೆ ಬಯಲಿಗೆ ಬರಲಿದೆ. ಪೊಲೀಸರು ಆರೋಪಿ ಬಾಲಕಿ ಹಾಗೂ ತಾಯಿಯನ್ನು ಪ್ರಶ್ನಿಸಿದ್ದಾರೆ. ಆದ್ರೆ, ಬಾಲಕಿ ವಿಷ ಬೆರೆಸಿದ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಬಾಲಕಿಯ ತಮ್ಮನನ್ನು, ಶಾಲಾ ವಿದ್ಯಾರ್ಥಿಯೊಬ್ಬ ಇಟ್ಟಿಗೆಯಿಂದ ಹೊಡೆದಿದ್ದ. ಪರಿಣಾಮ ಬಾಲಕ ಸಾವನ್ನಪ್ಪಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...