alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಹೊರಗೆ ಮಲಗಿದ್ದ ತಂದೆ ಮಗನ ಮೇಲೆ ಬಾಂಬ್ ಎಸೆದ್ರು

ಉತ್ತರ ಪ್ರದೇಶದಲ್ಲಿ ಮನೆ ಹೊರಗೆ ಮಲಗಿದ್ದ ತಂದೆ-ಮಗನನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಬಾಂಬ್ ಸಿಡಿಸಿ ಕೊಲೆ ಮಾಡಿದ್ದಾರೆ. ಘಟನೆಗೆ ಹಳೆ ದ್ವೇಷವೇ ಕಾರಣ ಎನ್ನಲಾಗ್ತಿದೆ.

ಘಟನೆ ಮಿಲಕೋಪರ್ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಉದ್ಯಮಿ ಲಾಲ್ಜಿ ಯಾದವ್ ಹಾಗೂ 20 ವರ್ಷದ ಚಂದನ್ ಯಾದವ್ ಮನೆ ಹೊರಗೆ ಮಲಗಿದ್ದರು. ಮಂಗಳವಾರ ರಾತ್ರಿ ದೊಡ್ಡ ಶಬ್ಧವೊಂದು ಕೇಳಿದೆ. ಸ್ಥಳೀಯರು ಟೈರ್ ಸ್ಫೋಟಗೊಂಡಿದೆ ಎಂದುಕೊಂಡಿದ್ದಾರೆ. ಬೆಳಿಗ್ಗೆ ಎದ್ದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸ್, ಅಗ್ನಿ ಶಾಮಕ ದಳ, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ತಜ್ಞರು ಐಇಡಿ ಬಳಸಿಕೊಂಡು ಬಾಂಬ್ ಸ್ಫೋಟ ಮಾಡಿದ್ದಾರೆಂಬುದು ಪ್ರಾಥಮಿಕ ವರದಿಯಿಂದ ಬಹಿರಂಗವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...