alex Certify
ಕನ್ನಡ ದುನಿಯಾ       Mobile App
       

Kannada Duniya

450 ವರ್ಷಗಳ ಬಳಿಕ ವಾರಣಾಸಿ ಕುಸ್ತಿ ಅಖಾಡದಲ್ಲಿ ಮಹಿಳೆಯರು….

ವಾರಣಾಸಿಯಲ್ಲಿ 450 ವರ್ಷಗಳ ಹಳೆಯ ಕಟ್ಟುಪಾಡಿಗೆ ಬ್ರೇಕ್ ಬಿದ್ದಿದೆ. ಇದೇ ಮೊದಲ ಬಾರಿ ಹೆಣ್ಣು ಮಕ್ಕಳು ಕೂಡ ಕುಸ್ತಿ ಅಖಾಡಕ್ಕೆ ಇಳಿದಿದ್ದಾರೆ. ನಂದಿನಿ ಸರ್ಕಾರ್ ಹಾಗೂ ಆಸ್ಥಾ ವರ್ಮಾ ಗಂಗಾ ತಟದಲ್ಲಿರುವ ತುಳಸಿದಾಸ್ ಅಖಾಡ ಪ್ರವೇಶಿಸುವ ಮೂಲಕ ಹಳೆಯ ಕಟ್ಟುಪಾಡೊಂದಕ್ಕೆ ತಿಲಾಂಜಲಿ ಇಟ್ಟಿದ್ದಾರೆ.

ಸಂಕಟ್ ಮೋಚನ್ ದೇವಾಲಯ ಆಡಳಿತ ಮಂಡಳಿ ಹೆಣ್ಣುಮಕ್ಕಳಿಗೆ ಕೂಡ ಕುಸ್ತಿ ಅಖಾಡದಲ್ಲಿ ಪೈಪೋಟಿಗೆ ಇಳಿಯಲು ಅವಕಾಶ ಮಾಡಿಕೊಟ್ಟಿದೆ. 20 ವರ್ಷದ ಇಬ್ಬರು ವಿದ್ಯಾರ್ಥಿನಿಯರು ಪದವಿ ಓದುತ್ತಿದ್ದಾರೆ. ದೇವಾಲಯದ ಆಡಳಿತ ಮಂಡಳಿಯ ಮನವೊಲಿಸಿ ಹಳೆಯ ಆಚರಣೆಗೆ ಬ್ರೇಕ್ ಹಾಕಿದ್ದಾರೆ.

ದೀಪಾವಳಿ ಹಬ್ಬದಲ್ಲಿ ಮಹಿಳೆಯರ ಕುಸ್ತಿ ಪಂದ್ಯಗಳು ಕೂಡ ನಡೆಯಲಿವೆ. ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲಿ ಮಹಿಳಾ ಸ್ವಾತಂತ್ರ್ಯಕ್ಕೆ ಕುಂದು ಬರಬಾರದು ಅನ್ನೋದು ಅವರ ವಾದವಾಗಿತ್ತು. ಈ ಇಬ್ಬರೂ ಯುವತಿಯರು ಕುಸ್ತಿಯಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಾರೆ.

ನಂದಿನಿ ಹಾಗೂ ಆಸ್ಥಾ ಇಬ್ಬರೂ ಬಡ ಕುಟುಂಬದಿಂದ ಬಂದವರು. ನಂದಿನಿ ತಂದೆ ತೀರ್ಥ ಕ್ಷೇತ್ರಗಳಲ್ಲಿ ಸಿಹಿ ತಿನಿಸು ಮಾರಾಟ ಮಾಡ್ತಾರೆ. ಆಸ್ಥಾಳ ತಂದೆ ಬದುಕಿಲ್ಲ. ತಾಯಿ ಕೇದಾರ್ ಘಾಟ್ ನಲ್ಲಿ ಹೂವು ಮಾರಾಟ ಮಾಡಿ ಮಗಳ ಕುಸ್ತಿಯ ಕನಸಿಗೆ ನೀರೆರೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...