alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ತೆ ಜೊತೆ ನಾಯಿ ಮದುವೆ ಮಾಡಿಸಿ ಪ್ರೇಮಿಗಳ ದಿನಕ್ಕೆ ವಿರೋಧ

ಪ್ರೇಮಿಗಳು ವ್ಯಾಲಂಟೈನ್ಸ್ ಡೇ ಖುಷಿಯಲ್ಲಿದ್ದರೆ ವಿರೋಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂದೂ ಸಂಘಟನೆಗಳು ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿವೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಹಿಂದೂ ಸಂಘಟನೆ ಭಿನ್ನವಾಗಿ ಪ್ರತಿಭಟನೆ ನಡೆಸಿದೆ.

ಭಾರತ್ ಹಿಂದೂ ಫ್ರಂಟ್ ಸದಸ್ಯರು ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸಿ ಕತ್ತೆ ಜೊತೆ ನಾಯಿ ಮದುವೆ ಮಾಡಿಸಿದ್ದಾರೆ. ಪ್ರತಿಭಟನೆ ನಂತ್ರ ಪೊಲೀಸರು ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ. ಕತ್ತೆ ಹಾಗೂ ನಾಯಿಗೆ ಹೂವಿನ ಹಾರ ಹಾಕಿದ್ರು. ನಂತ್ರ ಕುಂಕುಮವಿಟ್ಟರು. ಪ್ರತಿಭಟನಾಕಾರರು ವಿರೋಧಿ ಘೋಷಣೆ ಕೂಡ ಕೂಗಿದ್ರು.

ಗುಜರಾತಿನ ಸಬರಮತಿಯಲ್ಲಿ ಭಜರಂಗಿದಳದ ಸದಸ್ಯರು ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಇನ್ನು ಕರ್ನಾಟಕದಲ್ಲಿ ವಾಟಾಳ್ ನಾಗರಾಜ್ ಪಕ್ಷ ಪ್ರೇಮಿಗಳ ದಿನಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಎರಡು ಕುರಿಗಳಿಗೆ ಮದುವೆ ಮಾಡಿಸಿ ವ್ಯಾಲಂಟೈನ್ಸ್ ಡೇಯನ್ನು ಬೆಂಬಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...