alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ದಿನದಂದು ಯೂನಿವರ್ಸಿಟಿ ಬಂದ್, ಕಾರಣ ಗೊತ್ತಾ…?

ಇಂದು ಪ್ರೇಮಿಗಳ ದಿನ ಅನ್ನೋ ಕಾರಣಕ್ಕೆ ಲಖ್ನೋ ವಿಶ್ವವಿದ್ಯಾಲಯವನ್ನೇ ಬಂದ್ ಮಾಡಲಾಗಿದೆ. ವಿವಿ ಆವರಣದಲ್ಲಿ ವ್ಯಾಲಂಟೈನ್ ಡೇ ದಿನ ಓಡಾಡದಂತೆ ನಿನ್ನೆಯೇ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. ಇಂದು ಕ್ಯಾಂಪಸ್ ನಲ್ಲಿ ಕುಳಿತರೆ ಅಥವಾ ಸುತ್ತಾಡಿದ್ರೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಕೆಲವು ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಆಕರ್ಷಿತರಾಗಿ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುತ್ತಾರೆ. ಹಾಗಾಗಿ ಇಂದು ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳಿಸದಂತೆ ಪೋಷಕರಿಗೂ ಸೂಚಿಸಲಾಗಿದೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕ್ಯಾಂಪಸ್ ಹಾಗೂ ವಿವಿ ಬಂದ್ ಮಾಡೋದಾಗಿ ಸುತ್ತೋಲೆ ಹೊರಡಿಸಲಾಗಿದೆ.

ಹೆಚ್ಚುವರಿ ತರಗತಿ, ಸಾಂಸ್ಕೃತಿಕ ಕಾರ್ಯಕ್ರಮ ಯಾವುದೂ ಇರುವುದಿಲ್ಲ ಅಂತಾ ಹೇಳಲಾಗಿತ್ತು. 2009ರಲ್ಲಿ ವ್ಯಾಲಂಟೈನ್ ಡೇ ದಿನ ಕ್ಯಾಂಪಸ್ ನೊಳಕ್ಕೆ ಹೂವು, ಬೊಕೆ ಮತ್ತು ಗಿಫ್ಟ್ ತರದಂತೆ ನಿರ್ಬಂಧಿಸಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...