alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದ ಹುಂಡಿಯಲ್ಲಿವೆ ನಿಷೇಧಿತ ನೋಟುಗಳು

notes-pti-l-1ಕಪ್ಪು ಹಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ಬಳಿಕ ಕಂಗಾಲಾಗಿರುವ ಕಾಳ ಧನಿಕರು ತಮ್ಮ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಳ್ಳಲು ನಾನಾ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇವರುಗಳಿಗೆ ಈ ಕಾರ್ಯದಲ್ಲಿ ನೆರವಾದ ಕೆಲ ಭ್ರಷ್ಟ ಬ್ಯಾಂಕ್ ಅಧಿಕಾರಿಗಳು ಈಗ ಸಿಕ್ಕಿ ಬಿದ್ದಿದ್ದಾರೆ.

ಈ ಮಧ್ಯೆ ದೇಶದ ಹಲವು ದೇವಾಲಯಗಳ ಹುಂಡಿಯಲ್ಲಿ ಅಪಮೌಲ್ಯಗೊಂಡಿರುವ 500 ಹಾಗೂ 1000 ರೂ. ನೋಟುಗಳು ಬೀಳುತ್ತಿದ್ದು, ಚಲಾವಣೆ ನಿಷೇಧಗೊಂಡ ಬಳಿಕ ವೈಷ್ಣೋದೇವಿ ದೇವಾಲಯದಲ್ಲಿ ಈವರೆಗೆ 1.90 ಕೋಟಿ ರೂ. ಮೌಲ್ಯದ ನಿಷೇಧಗೊಂಡ ನೋಟುಗಳು ಸಿಕ್ಕಿವೆ.

ಭಕ್ತರಿಗೆ ಅನುಕೂಲವಾಗಲೆಂದು ದೇವಾಲಯದ ಹಲವು ಕಡೆ ಸ್ವೈಪ್ ಮೆಷಿನ್ ಗಳನ್ನು ಅಳವಡಿಸಲಾಗಿದ್ದು, 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಬಾರದೆಂದು ಸಿಬ್ಬಂದಿಗಳಿಗೆ ಸೂಚಿಸಿರುವುದಾಗಿ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹುಂಡಿಯಲ್ಲಿರುವ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮಾ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...