alex Certify
ಕನ್ನಡ ದುನಿಯಾ       Mobile App
       

Kannada Duniya

ದಿನದಲ್ಲಿ 50 ಸಾವಿರ ಭಕ್ತರಿಗೆ ಮಾತ್ರ ವೈಷ್ಣೋದೇವಿ ದರ್ಶನ

ವೈಷ್ಣೋ ದೇವಿ ದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಮಹತ್ವದ ಸೂಚನೆಯೊಂದನ್ನು ನೀಡಿದೆ. ಒಂದು ದಿನ 50 ಸಾವಿರಕ್ಕೂ ಹೆಚ್ಚು ಭಕ್ತರು ದೇವಿ ದರ್ಶನಕ್ಕೆ ತೆರಳ ಬಾರದೆಂದು ಎನ್ ಜಿ ಟಿ ಹೇಳಿದೆ. ಸೋಮವಾರದಿಂದಲೇ ಈ ನಿಯಮ ಜಾರಿಗೆ ಬಂದಿದೆ.

ದಿನ ದಿನಕ್ಕೂ ವೈಷ್ಣೋ ದೇವಿ ದರ್ಶನಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎನ್ ಜಿ ಟಿ ಈ ನಿರ್ಧಾರ ಕೈಗೊಂಡಿದೆ. 50 ಸಾವಿರಕ್ಕೂ ಹೆಚ್ಚು ಭಕ್ತರು ಸ್ಥಳಕ್ಕೆ ಬಂದಲ್ಲಿ ಅವ್ರನ್ನು ಕತ್ರಾದಲ್ಲಿ ತಡೆಯುವಂತೆ ಎನ್ ಜಿ ಟಿ ಹೇಳಿದೆ.

ವೈಷ್ಣೋ ದೇವಿ 50 ಸಾವಿರ ಭಕ್ತರ ಕ್ಷಮತೆ ಮಾತ್ರ ಹೊಂದಿದೆ. ಇದಕ್ಕಿಂತ ಹೆಚ್ಚಿನ ಭಕ್ತರು ಪ್ರವೇಶ ಮಾಡಿದಲ್ಲಿ ಸಮಸ್ಯೆಯುಂಟಾಗಬಹುದು. ಹಾಗಾಗಿ 50 ಸಾವಿರ ಭಕ್ತರಿಗೆ ಮಾತ್ರ ದರ್ಶನವನ್ನು ಸೀಮಿತ ಮಾಡಿ ಎಂದು ಎನ್ ಜಿ ಟಿ ಹೇಳಿದೆ. ಆದ್ರೆ ಈ ನಿರ್ಬಂಧ ಎಷ್ಟು ದಿನಗಳವರೆಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭೂ ಕುಸಿತದಂತ ಘಟನೆ ವೈಷ್ಣೋ ದೇವಿಯಲ್ಲಿ ನಡೆಯುವುದ್ರಿಂದ ಹಾಗೂ ಮಾಲಿನ್ಯ ತಡೆಗೆ ಎನ್ ಜಿ ಟಿ ಹೊಸ ಕಟ್ಟಡ ನಿರ್ಮಾಣದ ಮೇಲೂ ನಿಷೇಧ ಹೇರಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...