alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಗಾಗಿ ನ್ಯೂಜಿಲ್ಯಾಂಡ್ ಗೆ ಹೋಗಿದ್ದ ದಂಪತಿಗೆ ಇದೇನಾಯ್ತು?

ಹೊಸದಾಗಿ ಮದುವೆಯಾಗಿದ್ದ ವಡೋದರಾದ ನವ ದಂಪತಿ ಹನಿಮೂನ್ ಗಾಗಿ ನ್ಯೂಜಿಲ್ಯಾಂಡ್ ಗೆ ಹೋಗಿದ್ದರು. ಈ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಮಕರ ಸಂಕ್ರಾಂತಿಯಂದು ಸಮುದ್ರಕ್ಕಿಳಿದಿತ್ತು ಜೋಡಿ. ಆದ್ರೆ ಸಮುದ್ರದ ಅಲೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಹೆಲಿಕ್ಯಾಪ್ಟರ್ ಸಹಾಯದಿಂದ ರಕ್ಷಣಾ ಕಾರ್ಯ ನಡೆದಿದೆ. ಆದ್ರೆ ಪತಿ ಬದುಕಿ ಬರಲಿಲ್ಲ. ಪತ್ನಿಯನ್ನು ಮಾತ್ರ ರಕ್ಷಿಸಲಾಗಿದೆ. ಮೃತ ವ್ಯಕ್ತಿ ಶವವನ್ನು ವಡೋದರಾಕ್ಕೆ ತರಲಾಗುವುದು ಎಂದು ಮೂಲಗಳು ಹೇಳಿವೆ. 26 ವರ್ಷದ ಹೆಮಿನ್ ಜನವರಿ 14ರಂದು ವೈಮಾರಾ ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಮಗನ ಸಾವು ಕುಟುಂಬಸ್ಥರಿಗೆ ನುಂಗಲಾಗದ ತುತ್ತಾಗಿದೆ.

ಡಿಸೆಂಬರ್ ನಾಲ್ಕು 2017ರಂದು ವಡೋದರಾದ ನಿವಾಸಿ ತನ್ವಿ ಜೊತೆ ಹೆಮಿನ್ ಮದುವೆಯಾಗಿತ್ತು. ಇಬ್ಬರು ಪ್ರೇಮಿಗಳಾಗಿದ್ದು, ಅದ್ಧೂರಿಯಾಗಿ ಮದುವೆಯಾಗಿದ್ದರು. ಹನಿಮೂನ್ ಗಾಗಿ ದಂಪತಿ ನ್ಯೂಜಿಲ್ಯಾಂಡ್ ಗೆ ಹೋಗಿದ್ದರು. ಆದ್ರೆ ನ್ಯೂಜಿಲ್ಯಾಂಡ್ ಸಮುದ್ರದಲ್ಲಿ ಕಾದು ಕುಳಿತಿದ್ದ ಯಮ ಹೆಮಿನ್ ಗೆ ಗಾಳ ಹಾಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...