alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಯುವತಿ ಇದಕ್ಕಾಗಿ ಮುಂಬೈಗೆ ಬಂದ್ಳು…!

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಮದುವೆಯಾಗಲು 24 ವರ್ಷದ ಯುವತಿಯೊಬ್ಬಳು ಮನೆ ಬಿಟ್ಟು ಮುಂಬೈಗೆ ಓಡಿ ಬಂದಿದ್ದಾ:ಎ.  ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್‌ ಗೇಟ್‌ನಲ್ಲಿ ಸಲ್ಮಾನ್‌ ಖಾನ್‌ ಅವರನ್ನು ಮದುವೆಯಾಗಲು ಬಂದಿದ್ದೇನೆ. ನನ್ನನ್ನು ಒಳಗೆ ಬಿಡುವಂತೆ ಭದ್ರತಾ ಸಿಬ್ಬಂದಿ ಜತೆ ಈ ಯುವತಿ ಗಲಾಟೆ ಮಾಡಿದ್ದಾಳೆ.

ಸೆಕ್ಯುರಿಟಿ ಗಾರ್ಡ್‌ಗಳು ಯುವತಿಯನ್ನು ಅಪಾರ್ಟ್‌ಮೆಂಟ್‌ ಬಳಿಯಿಂದ ಓಡಿಸಿದ್ದಾರೆ. ಅಲ್ಲೇ ಆಸುಪಾಸು ತಿರುಗಾಡುತ್ತಿದ್ದ ಈಕೆಯ ಮೇಲೆ ಅನುಮಾನಗೊಂಡ ಕೆಲವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ.

ಆ. 11ರಂದು ಮನೆಯಿಂದ ತಪ್ಪಿಸಿಕೊಂಡು ಮುಂಬೈಗೆ ಆಗಮಿಸಿದ್ದ ಯುವತಿ, ತಾನು ನಟ ಸಲ್ನಾನ್‌ ಖಾನ್‌ ಅವರನ್ನು ಮದುವೆಯಾಗಲು ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಕೆಲ ದಿನಗಳ ನಂತರ ಯುವತಿ ತನ್ನ ತಂದೆಯ ಫೋನ್‌ ನಂಬರ್‌ ಹೇಳಿದ್ದಾಳೆ. ಪೋಷಕರಿಗೆ ವಿಷಯ ತಿಳಿಸಿದ ಬಳಿಕ, ಠಾಣೆಗೆ ಬಂದು ಕರೆದೊಯ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...