alex Certify
ಕನ್ನಡ ದುನಿಯಾ       Mobile App
       

Kannada Duniya

ಆಧುನಿಕ ಮದರಸಾ ತೆರೆಯಲಿದೆ ಆರ್.ಎಸ್.ಎಸ್.

ಉತ್ತರಾಖಂಡದಲ್ಲಿ ಆರ್.ಎಸ್.ಎಸ್. ಮದರಸಾ ತೆರೆಯಲಿದೆ. ಇದಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಹೊಸ ಆಧುನಿಕ ಮದರಸಾದಲ್ಲಿ ಕೆಲವೇ ದಿನಗಳಲ್ಲಿ ವಿದ್ಯಾಭ್ಯಾಸ ಶುರುವಾಗಲಿದೆ. ರಾಷ್ಟ್ರೀಯ ಮುಸ್ಲಿಂ ಫೋರಮ್ ಮೂಲಕ ಮದರಸಾವನ್ನು ತೆರೆಯಲಾಗ್ತಿದೆ.

ರಾಷ್ಟ್ರೀಯ ಮುಸ್ಲಿಂ ಫೋರಮ್ ಆರ್.ಎಸ್.ಎಸ್. ನ ಸಹಯೋಗಿ ಸಂಘವಾಗಿದೆ. ಯುವಜತೆಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಸ್ಲಿಂ ಯುವಕರನ್ನು ಬಿಜೆಪಿಯತ್ತ ಸೆಳೆಯುವುದು ಮುಖ್ಯ ಗುರಿಯಾಗಿದೆ. ಸದ್ಯ ಉತ್ತರಾಖಂಡದಲ್ಲಿ 20 ಸಾವಿರಕ್ಕಿಂತ ಹೆಚ್ಚು ಮಕ್ಕಳು 297 ಮದರಸಾ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ.

ಮದರಸಾಗಳಲ್ಲಿ ಮುಸ್ಲಿಂ ಧರ್ಮವನ್ನು ಮಾತ್ರ ಬೋಧಿಸಲಾಗುತ್ತದೆ. ಆಧುನಿಕ ಶಿಕ್ಷಣದ ಕೊರತೆ ಎದ್ದು ಕಾಣ್ತಿದೆ. ಪಾರಂಪರಿಕ ಶಿಕ್ಷಣದ ಜೊತೆ ಕಂಪ್ಯೂಟರ್, ವಿಜ್ಞಾನದ ಶಿಕ್ಷಣ ಮಕ್ಕಳಿಗೆ ಅತ್ಯಗತ್ಯ. ಅನೇಕ ವರ್ಷಗಳಿಂದ ಆರ್.ಎಸ್.ಎಸ್. ಈ ಸಂಬಂಧ ಕೆಲಸ ಮಾಡುತ್ತಿದೆ. ಉತ್ತರಾಖಂಡದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಮದರಸಾ ತೆರೆಯುವ ಯೋಜನೆ ಆರ್.ಎಸ್.ಎಸ್. ಗಿದೆ. ಹೊಸ ಮದರಸಾಗಳಲ್ಲಿ ಆಧುನಿಕ ಶಿಕ್ಷಣ ಮಕ್ಕಳಿಗೆ ಸಿಗಲಿದೆ. ಡೆಹ್ರಾಡೂನ್ ನಲ್ಲಿ ಮೊದಲ ಮದರಸಾ ಕೆಲಸ ಶುರು ಮಾಡಲಿದೆ. ಆರ್.ಎಸ್.ಎಸ್., ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದು, ಸರ್ಕಾರವೇ ಜಮೀನು ನೀಡುವ ಸಾಧ್ಯತೆ ಹೆಚ್ಚಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...