alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಹೊಟ್ಟೆ ಕರಗಿಸಲೊಂದು ವಿಚಿತ್ರ ವಿಧಾನ !

police yogaಆಧುನಿಕತೆಯಿಂದಾಗಿ ಒತ್ತಡದ ಜೀವನದಿಂದ ನಿಗದಿತ ವೇಳೆಗೆ ಆಹಾರ ಸೇವಿಸಲ್ಲ. ಕುಳಿತು ಮಾಡುವ ಕೆಲಸಗಳಿಂದ ಬೊಜ್ಜು ಬರುತ್ತದೆ. ಅಲ್ಲದೇ ಚಿಕ್ಕವಯಸ್ಸಿಗೆ ಅನೇಕ ಕಾಯಿಲೆಗಳು ಆವರಿಸುತ್ತವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವರು ಯೋಗದ ಮೊರೆ ಹೋಗುತ್ತಾರೆ.

ಬೊಜ್ಜು ಬಂದ ಪೊಲೀಸರ ಪಡಿಪಾಟಲನ್ನು ನೀವು ನೋಡಿರುತ್ತೀರಿ. ಹೊಟ್ಟೆ ಕರಗಿಸಲು ಏನೆಲ್ಲಾ ಪ್ರಯತ್ನ ಮಾಡುತ್ತಾರೆ. ಉತ್ತರಾಖಂಡ್ ಪೊಲೀಸರಿಗೆ ಬೊಜ್ಜು ಸಿಕ್ಕಾಪಟ್ಟೆ ಜಾಸ್ತಿ ಇದೆಯಂತೆ ಹಾಗಾಗಿ ಬೊಜ್ಜು ಕರಗಿಸಲೇಬೇಕು ಇಲ್ಲದಿದ್ದರೆ ಕಳ್ಳರನ್ನು ಹೇಗೆ ಹಿಡಿಯುತ್ತೀರಿ ಎಂದು ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದರು. ಇದಕ್ಕೆ ಹಲವರು ತಲೆಕೆಡಿಸಿಕೊಂಡಿಲ್ಲದ ಕಾರಣ ಅವರೇ ಒಂದಿಷ್ಟು ಯೋಗದ ಟಿಪ್ಸ್ ನೀಡಿದ್ದಾರೆ. ಅದೇನೆಂದರೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬೆನ್ನಮೇಲೆ ಹೊತ್ತುಕೊಂಡು ತಿರುಗಬೇಕು.

ಪೊಲೀಸ್ ಇಲಾಖೆಯಲ್ಲಿದ್ದರೂ ದೈಹಿಕ ಸದೃಢತೆ ಹೊಂದದೆ ಬೊಜ್ಜು ಬೆಳೆಸಿಕೊಂಡಿರುವ ಪೊಲೀಸರಿಗೆ ಬೆನ್ನಮೇಲೆ ಜಾಸ್ತಿ ತೂಕದ ಹಿರಿಯ ಅಧಿಕಾರಿಗಳನ್ನು ಹೊತ್ತು ಮೈದಾನದಲ್ಲಿ ರೌಂಡ್ ಹೊಡೆಯುವ ಶಿಕ್ಷೆ ನೀಡಲಾಗಿದೆ. ಇಂತಹ ವಿಚಿತ್ರ ಯೋಗದ ಪ್ರಯೋಗವೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...