alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಸಿಎಸ್ ಪರೀಕ್ಷೆಯಲ್ಲಿ ಆಟೋ ಚಾಲಕನ ಪುತ್ರಿ ಟಾಪರ್

ಉತ್ತರಾಖಂಡ್ ನ ಪ್ರಾಂತೀಯ ನಾಗರಿಕ ಸೇವಾ (PCS) ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಆಟೋ ಚಾಲಕನ ಮಗಳು ಪೂನಂ ತೋಡಿ ಮೊದಲ ಸ್ಥಾನ ಗಳಿಸಿದ್ದಾಳೆ. ಡೆಹ್ರಾಡೂನ್ ನಿವಾಸಿಯಾಗಿರೋ ಪೂನಂ, DAV PG ಕಾಲೇಜಿನಲ್ಲಿ ಎಂ. ಕಾಮ್ ಮುಗಿಸಿದ್ಲು.

ಅದೇ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಕೂಡ ಪಡೆದಿದ್ಲು. ಎಲ್ ಎಲ್ ಎಂ ನಲ್ಲೂ ಉತ್ತಮ ಫಲಿತಾಂಶ ಪಡೆದಿದ್ದ ವಿದ್ಯಾರ್ಥಿನಿ ಈಗ ಟಾಪರ್ ಆಗಿದ್ದಾಳೆ. ಪಿಸಿಎಸ್ ಜುಡಿಶಿಯಲ್ ಪರೀಕ್ಷೆಯನ್ನು ಪೂನಂ ಮೂರನೇ ಬಾರಿಗೆ ಬರೆದಿದ್ಲು.

ಕಳೆದ ಎರಡು ಬಾರಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ಲು. ಆದ್ರೆ ಸಂದರ್ಶನದಲ್ಲಿ ಪಾಸ್ ಆಗಿರಲಿಲ್ಲ. ಆಟೋ ಚಾಲಕರಾಗಿರೋ ಪೂನಂ ತಂದೆ, ಮಗಳ ಶಿಕ್ಷಣಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಸಹೋದರ ಮತ್ತು ತಾಯಿ ಕೂಡ ಪೂನಂಳನ್ನು ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸುತ್ತಿದ್ರು. ಇಂತಹ ಮಗಳು ಎಲ್ಲರಿಗೂ ಸಿಗಬೇಕು ಎನ್ನುತ್ತಿದ್ದಾರೆ ಪೂನಂ ಹೆತ್ತವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...