alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಘಸ್ಪೋಟದಿಂದ 25 ಮಂದಿ ದುರ್ಮರಣ

uttarkand-fg

ಡೆಹ್ರಾಡೂನ್/ಪಿಥೋರ್ ಗಡ್: ಉತ್ತರಾಖಂಡ್ ನ ಕೈಲಾಸ ಮಾನಸ ಸರೋವರ ಯಾತ್ರೆ ಮಾರ್ಗದಲ್ಲಿ ಮೇಘಸ್ಪೋಟದಿಂದ ಭಾರೀ ಮಳೆ, ಭೂಕುಸಿತವಾಗಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ.

ಮೃತರಲ್ಲಿ 6 ಮಂದಿ ಸೈನಿಕರೂ ಇದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಅನೇಕ ಪ್ರದೇಶಗಳು ಸಂಪರ್ಕ ಕಳೆದುಕೊಂಡಿವೆ.

ಥವಘಾಟ್ ಬಳಿ ಮಾಂಗ್ತಾ ನದಿಯ ಪ್ರವಾಹದಿಂದಾಗಿ ಸೇನಾ ಶಿಬಿರ ಕೊಚ್ಚಿ ಹೋಗಿದೆ. ಅನೇಕ ರಸ್ತೆ, ಸೇತುವೆಗಳು ಕೂಡ ಕೊಚ್ಚಿಹೋಗಿವೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಅವಶೇಷಗಳಡಿ ಸಿಲುಕಿದ್ದ ಹಲವರನ್ನು ರಕ್ಷಿಸಲಾಗಿದೆ. ಅನೇಕ ಶವಗಳನ್ನು ಹೊರತೆಗೆಯಲಾಗಿದೆ. ಸೇನಾಪಡೆಗಳು, ವಿಪತ್ತು ನಿರ್ವಹಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿವೆ ಎಂದು ಪಿಥೋರ್ ಗಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ. ರವಿಶಂಕರ್ ತಿಳಿಸಿದ್ದಾರೆ.

ಭಾರೀ ಭೂಕುಸಿತವಾಗಿದ್ದರಿಂದ ಹಲವರು ನಾಪತ್ತೆಯಾಗಿದ್ದಾರೆ. ಆಸ್ತಿ ಪಾಸ್ತಿಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಅನೇಕರು ಪ್ರಾಣಕಳೆದುಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, 6 ಸೈನಿಕರು ಸೇರಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...