alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧವೆಯರನ್ನು ಮದುವೆಯಾದ್ರೆ ಯುಪಿ ಸರ್ಕಾರ ನೀಡಲಿದೆ 51 ಸಾವಿರ ರೂ.

yogi-adityanath-1494513487

ಉತ್ತರ ಪ್ರದೇಶದ ಯೋಗಿ ಸರ್ಕಾರ ವಿಧವೆಯರಿಗೆ ಮರು ಮದುವೆ ಮಾಡಿಸಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯುಪಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಉತ್ತರ ಪ್ರದೇಶದ ವಿಧವೆಯರನ್ನು ಮದುವೆಯಾದ್ರೆ 51 ಸಾವಿರ ರೂಪಾಯಿಯನ್ನು ಸರ್ಕಾರ ನೀಡಲಿದೆ. ಆರ್ಥಿಕ ಸಹಾಯದ ರೂಪದಲ್ಲಿ ಈ ಹಣ ಸಿಗಲಿದೆ.

ಇದ್ರಿಂದ ವಿಧವೆಯರ ಜೀವನದಲ್ಲಿ ಮತ್ತೆ ದಾಂಪತ್ಯ ಸುಖ ಸಿಗುವ ಜೊತೆಗೆ ಸರ್ಕಾರದಿಂದ ಆರ್ಥಿಕ ನೆರವು ಸಿಗಲಿದೆ. ಉತ್ತರ ಪ್ರದೇಶದಲ್ಲಿ ಈ ಯೋಜನೆ ಮೊದಲಿನಿಂದಲೂ ಜಾರಿಯಲ್ಲಿದೆ. ಮಹಿಳಾ ಕಲ್ಯಾಣ ಇಲಾಖೆ ವಿಧವೆಯರನ್ನು ಮದುವೆಯಾದ್ರೆ 11 ಸಾವಿರ ರೂಪಾಯಿಯನ್ನು ಈ ಹಿಂದೆ ನೀಡ್ತಾ ಇತ್ತು. ಆದ್ರೆ ಸಾಕಷ್ಟು ದಾಖಲೆಗಳನ್ನು ಒದಗಿಸಬೇಕಾಗಿತ್ತು. ಸರ್ಕಾರಿ ಕಚೇರಿಗೆ ಅಲೆಯಬೇಕಿತ್ತು. ಆದ್ರೆ ಯೋಗಿ ಸರ್ಕಾರ ಈ ಯೋಜನೆಯಲ್ಲಿ ಕೆಲವೊಂದು ಬದಲಾವಣೆಯನ್ನು ತಂದಿದೆ. ಹಾಗಾಗಿ ದಾಖಲಾತಿ ನೀಡಿ ಹಣ ಪಡೆಯುವುದು ಸುಲಭವಾಗಿದೆ,

ಮದುವೆಯಾದ ಫೋಟೋ ಹಾಗೂ ದಾಖಲೆಯೊಂದನ್ನು ಸಂಬಂಧಪಟ್ಟವರು ಸರ್ಕಾರಕ್ಕೆ ನೀಡಬೇಕಾಗುತ್ತದೆ. ಈ ಯೋಜನೆ ವಿಧವೆಯರಿಗೆ ನೆರವಾಗಲಿದ್ದು, ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...