alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಯೋಗಿಗೆ ಭಾರೀ ಮುಖಭಂಗ : ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಎಸ್ಪಿ

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಸಿಎಂ ಯೋಗಿಗೆ ಭಾರೀ ಹಿನ್ನೆಡೆಯಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ನೋವಿನ ಕಹಿಯುಂಡಿದೆ.

ಫುಲ್ಪುರ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿ ಯಶಸ್ಸು ಕಂಡಿದೆ. ಫುಲ್ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನರೇಂದ್ರ ಸಿಂಗ್ ಪಟೇಲ್ ಬಿಜೆಪಿ ಕೌಶೇಂದ್ರ ಸಿಂಗ್ ರನ್ನು ಸೋಲಿಸಿದ್ದಾರೆ. ನರೇಂದ್ರ ಸಿಂಗ್, ಕೌಶೇಂದ್ರ ಸಿಂಗ್ ರನ್ನು 59,613 ಮತಗಳಿಂದ ಸೋಲಿಸಿದ್ದಾರೆ. ಇತ್ತ ಗೋರಖ್ಪುರ ಕ್ಷೇತ್ರದಲ್ಲೂ ಸಮಾಜವಾದಿ ಪಕ್ಷ ನಿರ್ಣಾಯಕ ಮತ ಗಳಿಸುವಲ್ಲಿ ಯಶಸ್ವಿಯಾಗಿದೆ. 22 ಸಾವಿರ ಮತಗಳಿಂದ ಎಸ್ಪಿ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಕ್ಷೇತ್ರದ ಮೇಲೆ ಎಲ್ಲರ ಕಣ್ಣಿತ್ತು. ಗೋರಖ್ಪುರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎನ್ನಲಾಗ್ತಿತ್ತು. ಬಿಎಸ್ಪಿ, ಎಸ್ಪಿ ಬೆಂಬಲದೊಂದಿಗೆ ನಿಶಾದ್ ಪಕ್ಷದ ಎಂಜಿನಿಯರ್ ಪ್ರವೀಣ್ ನಿಶಾದ್ ಸ್ಪರ್ಧೆಗಿಳಿದಿದ್ದರು. ಮೂರು ದಶಕದ ನಂತ್ರ ಗೋರಕ್ಷನಾಥ್ ಪೀಠದಿಂದ ಯಾರೂ ಇಲ್ಲಿ ಕಣಕ್ಕಿಳಿದಿರಲಿಲ್ಲ. ಬಿಜೆಪಿ ಉಪೇಂದ್ರ ದತ್ ಶುಕ್ಲಾರನ್ನು ಕಣಕ್ಕಿಳಿಸಿತ್ತು. ಸರೀತಾ ಕರೀಂ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು.

ಕಡಿಮೆ ವೋಟು ಕೂಡ ಪಕ್ಷಗಳ ಆತಂಕಕ್ಕೆ ಕಾರಣವಾಗಿತ್ತು. ಗೋರಖ್ಪುರದಲ್ಲಿ ಶೇಕಡಾ 43ರಷ್ಟು ಮಾತ್ರ ಮತದಾನವಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...