alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಲ್ಲರೆ ಕಾಸಿಗಾಗಿ ಹುಡುಗೀರ ಮೊಬೈಲ್ ನಂಬರ್ ಮಾರಾಟ

number

ಉತ್ತರ ಪ್ರದೇಶದಲ್ಲಿರುವ ಮೊಬೈಲ್ ರಿಚಾರ್ಜ್ ಅಂಗಡಿಗಳಲ್ಲಿ ಯುವತಿಯರ ಮೊಬೈಲ್ ನಂಬರ್ ಮಾರಾಟ ದಂಧೆ ನಡೆಯುತ್ತಿದೆ. ಸಿಎಂ ಅಖಿಲೇಶ್ ಯಾದವ್ ಅವರು ಸ್ಥಾಪಿಸಿದ 1090 ಸಹಾಯವಾಣಿಗೆ ಸಾಕಷ್ಟು ದೂರು ಬಂದಿದ್ರಿಂದ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಮಾಹಿತಿಯನ್ನು ಬಯಲು ಮಾಡಿದ್ದಾರೆ.

ಕಳೆದ 4 ವರ್ಷಗಳಲ್ಲಿ ದಾಖಲಾದ 6 ಲಕ್ಷಕ್ಕೂ ಹೆಚ್ಚು ದೂರುಗಳ ಪೈಕಿ ಶೇ.90ರಷ್ಟು ಫೋನ್ ಮೂಲಕ ಬೆದರಿಕೆಗೆ ಸಂಬಂಧಪಟ್ಟವುಗಳಾಗಿವೆ. ಯುವತಿಯರು ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಲು ಬಂದ್ರೆ, ಅವರ ನಂಬರ್ ಅನ್ನು ಅಂಗಡಿಯಾತ 50-100 ರೂಪಾಯಿಗೆ ಪುಂಡರಿಗೆ, ಕಾಮುಕರಿಗೆ ಮಾರ್ತಾನೆ.

ನೋಡಲು ತುಂಬಾ ಚೆನ್ನಾಗಿದ್ದ ಯುವತಿಯಾಗಿದ್ರೆ ಅವಳ ನಂಬರ್ ಮಾರಿ 500 ರೂಪಾಯಿ ಪಡೀತಾನೆ. ಲಖ್ನೋ, ಕಾನ್ಪುರ್ ನಗರ್, ಅಲಹಾಬಾದ್, ವಾರಣಾಸಿ, ಆಗ್ರಾ ಹೀಗೆ ಎಲ್ಲಾ ಕಡೆಗಳಲ್ಲಿರುವ ರೀಚಾರ್ಜ್ ಅಂಗಡಿ ಮಾಲೀಕರದ್ದು ಇದೇ ಕಾಯಕ. ರೀಚಾರ್ಜ್ ಅಂಗಡಿಯವರಿಗೆ ಹಣ ಕೊಟ್ಟು ಹುಡುಗಿಯರ ನಂಬರ್ ಪಡೆಯುವ ಕಾಮುಕರು ಪದೇ ಪದೇ ಕರೆ ಮಾಡಿ ಕಿರುಕುಳ ನೀಡಿತ್ತಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...