alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿರುವ ಕೈದಿಗಳಿಗೆ ಕಾಡ್ತಿದೆ ಏಡ್ಸ್ ಭಯ…!

ಉತ್ತರ ಪ್ರದೇಶದ ವಿವಿಧ ಜೈಲಿನಲ್ಲಿ ಬಂಧಿಯಾಗಿರುವ ಕೈದಿಗಳು ನಿದ್ರೆ ಕಳೆದುಕೊಂಡಿದ್ದಾರೆ. ಕೈದಿಗಳಿಗೆ ಏಡ್ಸ್ ಭಯ ಕಾಡಲು ಶುರುವಾಗಿದೆ. ರಾಜ್ಯದ ಜೈಲಿನಲ್ಲಿ ಹೆಚ್ಐವಿ ಪಾಸಿಟಿವ್ ಕೈದಿಗಳ ಸಂಖ್ಯೆ ಹೆಚ್ಚಾಗ್ತಿರುವುದೇ ಇದಕ್ಕೆ ಕಾರಣವಾಗಿದೆ.

ರಾಜ್ಯದ ಜೈಲಿನಲ್ಲಿ ಬಂಧಿಯಾಗಿರುವ 459 ಕೈದಿಗಳು ಹೆಚ್ಐವಿ ಪಾಸಿಟಿವ್ ಎಂದು ವರದಿ ಹೇಳಿದೆ. ಅಂಕಿ-ಸಂಖ್ಯೆ ಹೊರಗೆ ಬರ್ತಿದ್ದಂತೆ ಕೈದಿಗಳಲ್ಲಿ ಆತಂಕ ಜಾಸ್ತಿಯಾಗಿದೆ. ಬಾಗ್ಪಾತ್ ಜೈಲಿನಲ್ಲಿ ಮಾಫಿಯಾ ಡಾನ್ ಮುನ್ನಾ ಭಜರಂಗಿ ಹತ್ಯೆ ನಂತ್ರ ಕೈದಿಗಳು ಆತಂಕಕ್ಕೊಳಗಾಗಿದ್ದರು. ಹೆಚ್ಚಿನ ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಮಧ್ಯೆ ಏಡ್ಸ್ ಭಯ ಕಾಡಲು ಶುರುವಾಗಿದೆ.

ಲಖ್ನೋ ಜೈಲಿನಲ್ಲಿ ಬಂಧಿಯಾಗಿರುವ 49 ಕೈದಿಗಳು, ಗಾಜಿಯಾಬಾದ್ ಜೈಲಿನಲ್ಲಿರುವ 46 ಕೈದಿಗಳು, ಅಲಿಗಢ ಜಿಲ್ಲೆಯ 24 ಕೈದಿಗಳು ಹಾಗೂ ಮುರಾದಾಬಾದ್ ನಲ್ಲಿ 34 ಕೈದಿಗಳು ಸೇರಿದಂತೆ ಪ್ರತಿಯೊಂದು ಜಿಲ್ಲಾ ಕಾರಾಗ್ರಹದಲ್ಲಿಯೂ ಹೆಚ್ಐವಿ ಪಾಸಿಟಿವ್ ಕೈದಿಗಳ ಸಂಖ್ಯೆ ಹೆಚ್ಚಾಗ್ತಿದೆ.

ರಾಜ್ಯದ ಎಲ್ಲಾ ಜೈಲಿನಿಂದ ಒಟ್ಟೂ 78739 ಕೈದಿಗಳ ರಕ್ತವನ್ನು ಪರಿಶೀಲನೆ ನಡೆಸಲಾಗಿದೆ. ಜೈಲಿನಲ್ಲಿ ಏಡ್ಸ್ ಬರಲು ಸಾಧ್ಯವಿಲ್ಲ. ಜೈಲಿಗೆ ಬರುವ ಮೊದಲೇ ಪರೀಕ್ಷೆ ನಡೆಯುತ್ತದೆ. ಅದ್ರಲ್ಲಿ ಹೆಚ್ಐವಿ ಪಾಸಿಟಿವ್ ಕಂಡು ಬಂದಲ್ಲಿ ಪ್ರತ್ಯೇಕ ಚಿಕಿತ್ಸೆ ನಡೆಯುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...