alex Certify
ಕನ್ನಡ ದುನಿಯಾ       Mobile App
       

Kannada Duniya

ಹಸು ರಕ್ಷಿಸಲು ಹೋಗಿ ಮಹಿಳೆಯನ್ನು ಬಲಿ ಪಡೆದ ಪೊಲೀಸ್ ಜೀಪ್

600010-451046-cow

ಉತ್ತರ ಪ್ರದೇಶದಲ್ಲಿ ಪೊಲೀಸ್ ಜೀಪು ಡಿಕ್ಕಿಯಾಗಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಮೃತ ಮಹಿಳೆಯ ಮೊಮ್ಮಕ್ಕಳು ಸೇರಿ ಮೂವರು ಗಾಯಗೊಂಡಿದ್ದಾರೆ. ಜೀಪಿಗೆ ಅಡ್ಡ ಬಂದಿದ್ದ ಹಸುವನ್ನು ರಕ್ಷಿಸಲು ಚಾಲಕ ಯತ್ನಿಸಿದ್ದರಿಂದ ಈ ಅವಘಡ ಸಂಭವಿಸಿದೆ.

ಹರಿಯಾ ಬಳಿ 60 ವರ್ಷದ ಉಷಾದೇವಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ಲು. ಈ ವೇಳೆ ಎದುರಿನಿಂದ ಪೊಲೀಸ್ ಜೀಪೊಂದು ಬರುತ್ತಿತ್ತು. ಜೀಪಿಗೆ ಅಡ್ಡಲಾಗಿ ಹಸುವೊಂದು ಬಂದುಬಿಟ್ಟಿದೆ. ಹಸುವನ್ನು ಬಚಾವ್ ಮಾಡಲು ಚಾಲಕ ಜೀಪನ್ನು ಟರ್ನ್ ಮಾಡಿದ್ದ.

ಆಗ ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ರಸ್ತೆ ಬದಿಯಲ್ಲಿ ಹೋಗ್ತಾ ಇದ್ದ ಉಷಾದೇವಿ ಮತ್ತು ಆಕೆಯ ಮೊಮ್ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಉಷಾದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 2 ಮತ್ತು 4 ವರ್ಷದ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...